* ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವಧ್ವಾನ್ ಬಂದರು ನಿರ್ಮಾಣ ಕಾಮಗಾರಿಗೆ ಆಗಸ್ಟ್ 30. 2024 ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
* ಇದು ದೇಶದ ಅತ್ಯಂತ ಆಳದ ಬಂದರು ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಒಟ್ಟು 76,000 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ.
* 2029ರಲ್ಲಿ ಈ ಯೋಜನೆಯ ಮೊದಲ ಹಂತ ಮುಕ್ತಾಯಗೊಳ್ಳಲಿದ್ದರೆ 2039ರಲ್ಲಿ ನಿರ್ಮಾಣ ಪೂರ್ತಿಗೊಳ್ಳಲಿದೆ. ಸದ್ಯ ಮುಂಬಯಿಯದ್ದು ದೇಶದ ಅತೀ ಆಳದ ಬಂದರು ಆಗಿದೆ.
* ಬಂದರು ಮಧ್ಯ ಏಷ್ಯಾ ಮತ್ತು ರಷ್ಯಾದೊಂದಿಗೆ ಭಾರತದ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮೂಲಕ ವ್ಯಾಪಾರವನ್ನು ಉತ್ತೇಜಿಸುತ್ತದೆ.
* ಏನಿದು ಯೋಜನೆ?
- 12 ಲಕ್ಷ: ಸೃಷ್ಟಿಯಾಗಲಿರುವ ನೇರ ಉದ್ಯೋಗ
- 1 ಕೋಟಿ: ಸೃಷ್ಟಿಯಾಗಲಿರುವ ಪರೋಕ್ಷ ಉದ್ಯೋಗ
- 29.8 ಕೋಟಿ ಮೆಟ್ರಿಕ್ ಟನ್: ಸರಕು ನಿರ್ವಹಣೆ ಸಾಮರ್ಥ್ಯ
- 1448 ಹೆಕ್ಟೇರ್: ಬಳಕೆಯಾಗಲಿರುವ ಸಮುದ್ರ ಪ್ರದೇಶ
- 20 ಮೀಟರ್: ಬಂದರು ಹೊಂದಿರುವ ಆಳ
ಶನಿವಾರ, 31 ಆಗಸ್ಟ್ 2024
4:48 ಅಪರಾಹ್ನ
Daily PDF
ದೇಶದ ಅತೀ ಆಳದ ಬಂದರು ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ
Authored by:
Bhagya R K