* ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸೆಪ್ಟೆಂಬರ್ 06 ರಂದು (ಶುಕ್ರವಾರ) ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ಫೈನಲ್ ಸುತ್ತಿನಲ್ಲಿ 14.65 ಮೀಟರ್ ದೂರಕ್ಕೆ ಎಸೆಯುವ ಮೂಲಕ ಹೊಕಾಟೊ ಮೂರನೇ ಸ್ಥಾನ ಪಡೆದರು.
* ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯರು 19 ಪದಕಗಳನ್ನು ಗೆದ್ದಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 26+ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಪದಕಗಳ ಸಂಖ್ಯೆ 30ರ ಗಡಿದಾಟುವ ನಿರೀಕ್ಷೆಯಿದೆ.
* ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು. ಇನ್ನು ಈ ಸ್ಪರ್ಧೆಯಲ್ಲಿ ಇರಾನ್‌ನ ಯಾಸಿನ್ ಖೋಸ್ರಾವಿ 15.96 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರೆ, ಬ್ರೆಝಿಲ್‌ನ ಥಿಯಾಗೊ ಪಾಲಿನೊ ಡಾಸ್ ಸ್ಯಾಂಟೋಸ್ 15.06 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
* ಭಾರತವು 9 ದಿನಗಳ ಮುಕ್ತಾಯದ ವೇಳೆಗೆ ಒಟ್ಟು 27 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಒಳಗೊಂಡಿವೆ.
ಶನಿವಾರ, 07 ಸೆಪ್ಟೆಂಬರ್ 2024
10:54 ಪೂರ್ವಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಭಾರತಕ್ಕೆ 27ನೇ ಪದಕ ಗೆದ್ದು ಕೊಟ್ಟ ಹೊಕಾಟೊ ಹೊಟೊಝೆ
Authored by:
Bhagya R K