* ಲಿಸ್ಬನ್‌ನಲ್ಲಿ ಸೆಪ್ಟೆಂಬರ್ 05 ರಂದು ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧದ ಪೋರ್ಚುಗಲ್ ಭರ್ಜರಿ ಗೆಲುವು ಸಾಧಿಸಿದೆ.
* ಪೋರ್ಚುಗಲ್ ದೇಶದ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 900 ಗೋಲು ದಾಖಲಿಸುವ ಮೂಲಕ ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
* ಪೋರ್ಚುಗಲ್ 2-1 ಗೋಲು ಅಂತರಗಳಿಂದ ಕ್ರೊವೇಷಿಯಾವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇತಿಹಾಸ ನಿರ್ಮಿಸಿದ್ದಾರೆ.
* ಫುಟ್‌ಬಾಲ್ ಇತಿಹಾಸದಲ್ಲಿ 900 ಗೋಲುಗಳನ್ನು ಹೊಡೆದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
* ಪೋರ್ಚುಗಲ್ ನಾಯಕ ಈಗಾಗಲೇ ವಿಶ್ವದಾದ್ಯಂತ ಕ್ಲಬ್‌ಗಳಿಗಾಗಿ 769 ಗೋಲುಗಳನ್ನು ಹೊಡೆದಿದ್ದಾರೆ. ಬಳಿಕ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 842 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ದಂತಕಥೆ ಪೀಲೆ 765 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಶುಕ್ರವಾರ, 06 ಸೆಪ್ಟೆಂಬರ್ 2024
4:56 ಅಪರಾಹ್ನ
Daily PDF
Cristiano Ronaldo: ಫುಟ್‌ಬಾಲ್ ಜಗತ್ತಿನಲ್ಲಿ 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ರೊನಾಲ್ಡೊ
Authored by:
Bhagya R K