* 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಭಾರತ ಐತಿಹಾಸಿಕ 29 ಪದಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ, ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದುಕೊಂಡಿದೆ. 
* 3 ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕ (5 ಚಿನ್ನ, 8 ಬೆಳ್ಳಿ, 6 ಕಂಚು) ಜಯಿಸಿತ್ತು. ಈಗ ಅದಕ್ಕಿಂತ 10 ಪದಕ ಅಧಿಕ ಗೆದ್ದಂತಾಗಿದೆ. ಕಳೆದ ಆವೃತ್ತಿಯ ಪದಕಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ 18ನೇ ಸ್ಥಾನದೊಂದಿಗೆ ಮೊದಲ ಬಾರಿ ಅಗ್ರ 20ರೊಳಗೆ ಸ್ಥಾನ ಸಂಪಾದಿಸಿದೆ.
* Paralympics 2024: ಭಾರತದ ಪದಕಗಳ ಪಟ್ಟಿ 
1. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಅವನಿ ಲೆಖರಾ – ಚಿನ್ನ
2. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಮೋನಾ ಅಗರ್ವಾಲ್ – ಕಂಚು
3. ಮಹಿಳೆಯರ 100 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
4. ಪುರುಷರ 10 ಮೀಟರ್ ಏರ್ ಪಿಸ್ತೂಲ್  ಎಸ್‌ಹೆಚ್1 (ಶೂಟಿಂಗ್) ನಲ್ಲಿ ಮನೀಶ್ ನರ್ವಾಲ್ – ಬೆಳ್ಳಿ
5. ಮಹಿಳೆಯರ 10ಮೀ ಏರ್ ಪಿಸ್ತೂಲ್ ಎಸ್‌ಹೆಚ್‌1 (ಶೂಟಿಂಗ್) ನಲ್ಲಿ ರುಬಿನಾ ಫ್ರಾನ್ಸಿಸ್ – ಕಂಚು
6. ಮಹಿಳೆಯರ 200 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
7. ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್)ನಲ್ಲಿ ನಿಶಾದ್ ಕುಮಾರ್ – ಬೆಳ್ಳಿ
8. ಪುರುಷರ ಡಿಸ್ಕಸ್ ಥ್ರೋ ಎಫ್56 (ಅಥ್ಲೆಟಿಕ್ಸ್) ನಲ್ಲಿ ಯೋಗೇಶ್ ಕಥುನಿಯಾ – ಬೆಳ್ಳಿ
9. ಪುರುಷರ ಸಿಂಗಲ್ಸ್ ಎಸ್‌ಎಲ್3 (ಬ್ಯಾಡ್ಮಿಂಟನ್) ನಲ್ಲಿ ನಿತೇಶ್ ಕುಮಾರ್ – ಚಿನ್ನ
10. ಮಹಿಳೆಯರ ಸಿಂಗಲ್ಸ್ ಎಸ್‌ಯು5 (ಬ್ಯಾಡ್ಮಿಂಟನ್) ನಲ್ಲಿ ತುಳಸಿಮತಿ ಮುರುಗೇಶನ್ – ಬೆಳ್ಳಿ
11. ಮಹಿಳೆಯರ ಸಿಂಗಲ್ಸ್ ಎಸ್‌ಯು5 (ಬ್ಯಾಡ್ಮಿಂಟನ್) ಮನೀಶಾ ರಾಮದಾಸ್ – ಕಂಚು
12. ಪುರುಷರ ಸಿಂಗಲ್ಸ್ ಎಸ್‌ಎಲ್4 (ಬ್ಯಾಡ್ಮಿಂಟನ್) ಸುಹಾಸ್ ಯತಿರಾಜ್ – ಬೆಳ್ಳಿ
13. ಮಿಶ್ರ ತಂಡ ಕಾಂಪೌಂಡ್ ಓಪನ್ (ಆರ್ಚರಿ) ರಾಕೇಶ್ ಕುಮಾರ್ – ಶೀತಲ್ ದೇವಿ – ಕಂಚು
14. ಪುರುಷರ ಜಾವೆಲಿನ್ ಎಫ್64 (ಅಥ್ಲೆಟಿಕ್ಸ್) ಸುಮಿತ್ ಆಂಟಿಲ್– ಚಿನ್ನ
15. ಮಹಿಳೆಯರ ಸಿಂಗಲ್ಸ್ ಎಸ್‌ಹೆಚ್‌6 (ಬ್ಯಾಡ್ಮಿಂಟನ್) ನಲ್ಲಿ ನಿತ್ಯ ಶ್ರೀ ಶಿವನ್ – ಕಂಚು
16. ಮಹಿಳೆಯರ 400 ಮೀ ಟಿ20 (ಅಥ್ಲೆಟಿಕ್ಸ್) ನಲ್ಲಿ ದೀಪ್ತಿ ಜೀವನ್​ಜಿ – ಕಂಚು
17. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಸುಂದರ್ ಸಿಂಗ್ ಗುರ್ಜರ್ – ಕಂಚು
18. ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಅಜೀತ್ ಸಿಂಗ್ – ಬೆಳ್ಳಿ
19. ಪುರುಷರ ಹೈಜಂಪ್ ಟಿ63 (ಅಥ್ಲೆಟಿಕ್ಸ್) ನಲ್ಲಿ ಮರಿಯಪ್ಪನ್ ತಂಗವೇಲು – ಕಂಚು
20. ಪುರುಷರ ಹೈ ಜಂಪ್ ಟಿ63 (ಅಥ್ಲೆಟಿಕ್ಸ್) ನಲ್ಲಿ ಶರದ್ ಕುಮಾರ್ – ಬೆಳ್ಳಿ
21. ಪುರುಷರ ಶಾಟ್ ಪುಟ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಸಚಿನ್ ಖಿಲಾರಿ – ಬೆಳ್ಳಿ
22. ಪುರುಷರ ವೈಯಕ್ತಿಕ ರಿಕರ್ವ್ (ಆರ್ಚರಿ) ಹರ್ವಿಂದರ್ ಸಿಂಗ್– ಚಿನ್ನ
23. ಪುರುಷರ ಕ್ಲಬ್‌ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಧರಂಬೀರ್ – ಚಿನ್ನ
24. ಪುರುಷರ ಕ್ಲಬ್  ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಪ್ರಣವ್ ಸೂರ್ಮಾ – ಬೆಳ್ಳಿ
25. ಜೂಡೋ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್ ಪರ್ಮಾರ್ – ಕಂಚು
26. ಟಿ64 ಹೈಜಂಪ್ (ಅಥ್ಲೆಟಿಕ್ಸ್) ಪ್ರವೀಣ್ ಕುಮಾರ್ – ಚಿನ್ನ
27. ಪುರುಷರ ಶಾಟ್‌ಪುಟ್‌  ಎಫ್57 (ಅಥ್ಲೆಟಿಕ್ಸ್) ಹೊಕಾಟೊ ಸೆಮಾ – ಕಂಚು
28. ಮಹಿಳೆಯರ 200 ಮೀ ಟಿ12 (ಅಥ್ಲೆಟಿಕ್ಸ್) ಸಿಮ್ರಾನ್ ಸಿಂಗ್ – ಕಂಚು
29. ಪುರುಷರ ಜಾವೆಲಿನ್ ಎಫ್41 (ಅಥ್ಲೆಟಿಕ್ಸ್) ನಲ್ಲಿ ನವದೀಪ್ ಸಿಂಗ್ – ಚಿನ್ನ
* 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಪ್ಯಾರಾಲಿಂಪಿಕ್ಸ್‌ ಆಯೋಜನೆ. ಸತತ 6ನೇ ಪ್ಯಾರಾಲಿಂಪಿಕ್ಸ್ ನಲ್ಲೂ ಪದಕ ಗಳಿಕೆಯಲ್ಲಿ ಚೀನಾ ನಂಬರ್ 94 ಚಿನ್ನ ಸೇರಿ ಬರೋಬ್ಬರಿ 220 ಪದಕಗಳನ್ನು ಗೆದ್ದಕೊಂಡಿದೆ.