* ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ವಿಭಾಗದಲ್ಲಿ ಅವನಿ ಲೇಖರಾ ಇತಿಹಾಸ ಸೃಷ್ಟಿಸಿದ್ದು, 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
* 2020 ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖರ ಅವರು ಚಿನ್ನದ ಪದಕ ಗೆದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದರು.
* ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಅವನಿ ಮುರಿದಿದ್ದಾರೆ. ವಾಸ್ತವವಾಗಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವನಿ ಒಟ್ಟಾರೆಯಾಗಿ 249.6 ಅಂಕ ಕಲೆಹಾಕಿ ಚಿನ್ನದ ಪದಕ ಗೆದ್ದಿದ್ದರು.
* ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್ (SH1) ಅರ್ಹತಾ ಸುತ್ತಿನಲ್ಲಿ 625.8 ಅಂಕ ಕಲೆಹಾಕಿ ಎರಡನೇ ಸ್ಥಾನ ಗಳಿಸುವ ಮೂಲಕ ಅವನಿ ಫೈನಲ್‌ಗೆ ಪ್ರವೇಶಿಸಿದ್ದರು.
* ಇದೀಗ ಪ್ಯಾರಿಸ್ನಲ್ಲಿ 249.7 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿರುವ ಅವನಿ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದಲ್ಲದೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆಯನ್ನು ಅವನಿ ಮಾಡಿದ್ದಾರೆ.
* ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನಾ ಅಗರ್ವಾಲ್ 228.7 ಅಂಕ ಗಳಿಸಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕೊರಿಯಾದ ಲೀ ಯುನ್ರಿ 246.8 ಅಂಕಗಳನ್ನು ಕಲೆಹಾಕಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
* 37 ವರ್ಷದ ಮೋನಾ ಅವರು ಶೂಟಿಂಗ್ ಗೂ ಮುಂಚೆ ಶಾಟ್‌ಪುಟ್, ಪವರ್‌ಲಿಫ್ಟಿಂಗ್ ಮತ್ತು ವೀಲ್‌ಚೇರ್ ವಾಲಿಬಾಲ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 228.7 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.
ಶುಕ್ರವಾರ, 30 ಆಗಸ್ಟ್ 2024
4:58 ಅಪರಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: 10 ಮೀ. ಏರ್ ರೈಫಲ್ನಲ್ಲಿ ಚಿನ್ನ ಪದಕ ಗೆದ್ದ ಅವನಿ ಲೇಖರಾ
Authored by:
Bhagya R K