* ಅಣ್ವಸ್ತ್ರ ಪ್ರಯೋಗ ಸಾಮರ್ಥ್ಯವುಳ್ಳ ಖಂಡಾಂತರ ದಾಳಿ ಉದ್ದೇಶದ ಭಾರತದ ಎರಡನೇ ಜಲಾಂತರ್ಗಾಮಿ ಕ್ಷಿಪಣಿಯನ್ನು ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಆಗಸ್ಟ್ 29 ರಂದು ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು.
* ಜಲಾಂತರ್ಗಾಮಿ ನೌಕೆಯು ಅದರ ಹಿಂದಿನದಕ್ಕಿಂತ ಗಮನಾರ್ಹವಾಗಿ ಹೆಚ್ಚು ಮುಂದುವರಿದಿದೆ ಮತ್ತು ಹಲವಾರು 'ಸ್ಥಳೀಯ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು' ಹೊಂದಿದೆ.
* 'ಐಎನ್ಎಸ್ ಅರಿಫಾತ್' ಕಾರ್ಯಾರಂಭವನ್ನು ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಭಾರತದ ನೌಕಾಪಡೆಯ ಸಾಮರ್ಥ್ಯದ ವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಎಂದೇ ವಿವರಿಸಲಾಗಿದೆ.
* ಎಸ್.ಎಸ್‌ಬಿಎನ್ ಗೋಪ್ಯವಾಗಿ ಅನುಷ್ಠಾನಗೊಳಿಸಲಾದ ಯೋಜನೆಯಾಗಿದೆ. ಪ್ರಥಮ ಜಲಾಂತರ್ಗಾಮಿ ಕ್ಷಿಪಣಿ ಐಎನ್‌ಎಸ್ ಅರಿಹಂತ್‌ನ ಪರೀಕ್ಷಾರ್ಥ ಪ್ರಯೋಗ ಜುಲೈ 2009ರಲ್ಲಿ ನಡೆದಿತ್ತು.ಇದನ್ನು ಹೆಚ್ಚು ಪ್ರಚಾರವಿಲ್ಲದೇ 2016ರಲ್ಲಿ ಕಾರ್ಯಾರಂಭಗೊಳಿಸಲಾಗಿತ್ತು.
* ಪ್ರಥಮ ಕ್ಷಿಪಣಿ ಐಎನ್‌ಎಸ್ ಅರಿಹಂತ್‌ನ ಪರೀಕ್ಷಾರ್ಥ ಪ್ರಯೋಗ ಅಕ್ಟೋಬರ್ 2022ರಲ್ಲಿ ಬಂಗಾಳಕೊಲ್ಲಿಯಲ್ಲಿ ನಡೆದಿದ್ದು ನಿಖರವಾಗಿ ಗುರಿ ತಲುಪಿತ್ತು ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಶುಕ್ರವಾರ, 30 ಆಗಸ್ಟ್ 2024
4:51 ಅಪರಾಹ್ನ
Daily PDF
ಎರಡನೇ ಜಲಾಂತರ್ಗಾಮಿ ಕ್ಷಿಪಣಿ ಕಾರ್ಯಾರಂಭಕ್ಕೆ ಸಜ್ಜು
Authored by:
Jyoti Angadi