➤ ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು (Shree Jagannath Temple Administration - SJTA) ದೇವಾಲಯಕ್ಕೆ ಸಂಬಂಧಿಸಿದ ಪವಿತ್ರ ಹೆಸರುಗಳು, ಪ್ರಸಾದ ಹಾಗೂ ಪವಿತ್ರ ಸ್ಥಳಗಳ ಹೆಸರುಗಳನ್ನು 'ಟ್ರೇಡ್‌ಮಾರ್ಕ್' ಆಗಿ ನೋಂದಾಯಿಸಲು ಐದು ಪ್ರಮುಖ ಅರ್ಜಿಗಳನ್ನು ಸಲ್ಲಿಸಿತ್ತು. ಈ ಅರ್ಜಿಗಳನ್ನು ಕೇಂದ್ರ ಟ್ರೇಡ್‌ಮಾರ್ಕ್ಸ್ ರಿಜಿಸ್ಟ್ರಿ (Trade Marks Registry) ಪರಿಶೀಲಿಸಿ, ಪ್ರಾಥಮಿಕ ಅನುಮೋದನೆ ನೀಡಿದ್ದು, ಅಧಿಕೃತ 'ಟ್ರೇಡ್‌ಮಾರ್ಕ್ ಜರ್ನಲ್'ನಲ್ಲಿ ಪ್ರಕಟಿಸಲು ಸಮ್ಮತಿಸಿದೆ.
➤ ಟ್ರೇಡ್‌ಮಾರ್ಕ್ ಅನುಮೋದನೆ ಪಡೆದ ಪ್ರಮುಖ ಪದಗಳು ಮತ್ತು ಅರ್ಥ:
- ಜಗನ್ನಾಥ ಧಾಮ (Jagannath Dham): ಚಾರ್ ಧಾಮಗಳಲ್ಲಿ ಒಂದಾದ ಪೂರಿ ಕ್ಷೇತ್ರವನ್ನು ಸೂಚಿಸುವ ಪವಿತ್ರ ಹೆಸರು.
- ಶ್ರೀಕ್ಷೇತ್ರ (Shree Kshetra): ಪೂರಿ ಪುಣ್ಯಕ್ಷೇತ್ರಕ್ಕೆ ನೀಡಲಾಗಿರುವ ಸಾಂಪ್ರದಾಯಿಕ ಹೆಸರು.
- ಮಹಾಪ್ರಸಾದ್ (Mahaprasad): ಜಗನ್ನಾಥ ದೇವರಿಗೆ ಅರ್ಪಿಸುವ ಹಾಗೂ ಆನಂದ ಬಜಾರ್‌ನಲ್ಲಿ ನೀಡಲಾಗುವ ಪವಿತ್ರ ನೈವೇದ್ಯ.
- ನೀಲಾಚಕ್ರ (Nilachakra): ದೇವಾಲಯದ ಮೇಲ್ಭಾಗದಲ್ಲಿರುವ ೮ ಕಡ್ಡಿಗಳ ಲೋಹದ ಚಕ್ರ (ದೇವಾಲಯದ ಸಂಕೇತ).
- ಕೋಯಿಲಿ ವೈಕುಂಠ (Koili Vaikuntha): ನವಕಳೇಬರ (Nabakalebara) ಆಚರಣೆಯ ಸಂದರ್ಭದಲ್ಲಿ ಹೊಸ ಮೂರ್ತಿಗಳನ್ನು ಕೆತ್ತಿ, ಹಳೆಯ ಮೂರ್ತಿಗಳನ್ನು ಸಮಾಧಿ ಮಾಡುವ ಪವಿತ್ರ ಉದ್ಯಾನ.
- ಪತಿತಪಾವನ (Patitapaban): ಸಿಂಹದ್ವಾರದ ಬಳಿ ಕಾಣಸಿಗುವ ಜಗನ್ನಾಥನ ರೂಪ.
- ಆನಂದ ಬಜಾರ್ (Ananda Bajara)ದೇವಾಲಯದ ಆವರಣದಲ್ಲಿ ಪ್ರಸಾದ ವಿತರಿಸುವ ಜಾಗ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ