* ಬಿ. ಎಂ. ಶ್ರೀ. ಪ್ರತಿಷ್ಠಾನ ನೀಡುವ ‘ಶ್ರೀಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಹಾಗೂ ಚಿಂತಕಿಯಾದ ಪ್ರೊ. ವೀಣಾ ಶಾಂತೇಶ್ವರ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹ 1 ಲಕ್ಷ ನಗದು, ಸ್ಮರಣಿಕೆ ಮತ್ತು ಅಭಿನಂದನಾ ಪತ್ರವನ್ನೊಳಗೊಂಡಿದೆ.
* ಕಮಲಿನಿ ಶಾ. ಬಾಲುರಾವ್ ಅವರು ಸ್ಥಾಪಿಸಿರುವ ದತ್ತಿಯಿಂದ ಬಿ. ಎಂ. ಶ್ರೀ. ಪ್ರತಿಷ್ಠಾನ ಪ್ರತಿ ವರ್ಷ ಈ ‘ಶ್ರೀ ಸಾಹಿತ್ಯ’ ಪ್ರಶಸ್ತಿ ನೀಡುತ್ತಿದ್ದು, ನಾಡೋಜ ಡಾ. ಹಂಪ.ನಾಗರಾಜಯ್ಯ, ಲೇಖಕಿ ರೂಪ ಹಾಸನ, ಪ್ರೊ. ಸೋಮಣ್ಣ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸರ್ವಾನುಮತದಿಂದ ವೀಣಾ ಶಾಂತೇಶ್ವರ ಅವರನ್ನು ಆಯ್ಕೆ ಮಾಡಿದೆ.
* ವೀಣಾ ಶಾಂತೇಶ್ವರ ಅವರು ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದ ಇವರು ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕಿಯಾಗಿದ್ದರು.
ಪ್ರೊ. ವೀಣಾ ಶಾಂತೇಶ್ವರಗೆ 'ಶ್ರೀ ಸಾಹಿತ್ಯ ಪ್ರಶಸ್ತಿ'
Published by Yallamma G
14 ಜನವರಿ 2025