➤ ಪ್ರವಾಸದ ಪ್ರಮುಖ ಮುಖ್ಯಾಂಶಗಳು:
- ಐತಿಹಾಸಿಕ ಪ್ರಥಮ ಭೇಟಿ: ಮೋಲ್ಡೋವಾ ಮತ್ತು ಉತ್ತರ ಮೆಸಿಡೋನಿಯಾ ದೇಶಗಳಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಅವರು ಪಾತ್ರರಾಗಿದ್ದಾರೆ.
- ಮೂರು ದಶಕಗಳ ನಂತರ ರೊಮೇನಿಯಾ ಭೇಟಿ: ಭಾರತದ ರಾಷ್ಟ್ರಪತಿಯೊಬ್ಬರು ರೊಮೇನಿಯಾ ದೇಶಕ್ಕೆ ಭೇಟಿ ನೀಡುತ್ತಿರುವುದು ಕಳೆದ 30 ವರ್ಷಗಳಲ್ಲಿ (3 ದಶಕಗಳು) ಇದೇ ಮೊದಲ ಬಾರಿಯಾಗಿದೆ (ಕೊನೆಯ ಭೇಟಿ: 1994).
- 3T ಸೂತ್ರ: ಈ ಭೇಟಿಯ ಮುಖ್ಯ ಉದ್ದೇಶ Trade (ವಾಣಿಜ್ಯ), Technology (ತಂತ್ರಜ್ಞಾನ) ಮತ್ತು Tourism (ಪ್ರವಾಸೋದ್ಯಮ) ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವುದಾಗಿದೆ.
➤ ಮೋಲ್ಡೋವಾ ಭೇಟಿ (ಜುಲೈ 20):
- ಆಹ್ವಾನಿಸಿದವರು: ಮೋಲ್ಡೋವಾ ಅಧ್ಯಕ್ಷೆ ಮೈಯಾ ಸಾಂಡು (Maia Sandu).
- ಚರ್ಚೆಯ ವಿಷಯಗಳು: ಕೃಷಿ, ಆರೋಗ್ಯ ಕ್ಷೇತ್ರ, ಫಾರ್ಮಾಸ್ಯುಟಿಕಲ್ಸ್, ಮಾಹಿತಿ ತಂತ್ರಜ್ಞಾನ (IT) ಮತ್ತು ಉನ್ನತ ಶಿಕ್ಷಣ (ವೈದ್ಯಕೀಯ ಶಿಕ್ಷಣ) ಕ್ಷೇತ್ರದಲ್ಲಿ ಸಹಕಾರ.
ಹಿನ್ನೆಲೆ: 2025 ರ ಪಹಲ್ಗಾಮ್ ಉಗ್ರರ ದಾಳಿಯನ್ನು ಮೋಲ್ಡೋವಾ ಬಲವಾಗಿ ಖಂಡಿಸಿ, ಭಾರತದ ಭಯೋತ್ಪಾದನಾ ವಿರೋಧಿ ನಿಲುವಿಗೆ ಬೆಂಬಲ ವ್ಯಕ್ತಪಡಿಸಿತ್ತು.
➤ ಉತ್ತರ ಮೆಸಿಡೋನಿಯಾ ಭೇಟಿ (ಜುಲೈ 21-22):
- ಆಹ್ವಾನಿಸಿದವರು: ಉತ್ತರ ಮೆಸಿಡೋನಿಯಾ ಅಧ್ಯಕ್ಷೆ ಗೋರ್ಡಾನಾ ಸಿಲ್ಜಾನೋವ್ಸ್ಕಾ-ದಾವ್ಕೋವಾ (Gordana Siljanovska-Davkova).
- ಚರ್ಚೆಯ ವಿಷಯಗಳು: ವಿಜ್ಞಾನ-ತಂತ್ರಜ್ಞಾನ, ಕೃಷಿ, IT & ITES ವಲಯಗಳು. ಉತ್ತರ ಮೆಸಿಡೋನಿಯಾವನ್ನು ಭಾರತೀಯ ಉದ್ಯಮಗಳಿಗೆ ಯುರೋಪ್‌ನ ಪ್ರವೇಶದ್ವಾರವನ್ನಾಗಿ (Gateway to Europe) ಮಾಡುವುದು ಈ ಮಾತುಕತೆಯ ಪ್ರಮುಖ ವಿಷಯ.
- ವಿಶೇಷತೆ: ರಾಷ್ಟ್ರಪತಿಯವರು ಉತ್ತರ ಮೆಸಿಡೋನಿಯಾದ ಸಂಸತ್ತನ್ನು (Assembly) ಉದ್ದೇಶಿಸಿ ಮಾತನಾಡಲಿದ್ದಾರೆ.
➤ ರೊಮೇನಿಯಾ ಭೇಟಿ (ಜುಲೈ 23-25):
- ಆಹ್ವಾನಿಸಿದವರು: ರೊಮೇನಿಯಾ ಅಧ್ಯಕ್ಷ ನಿಕುಷೋರ್ ಡ್ಯಾನ್ (Nicușor Dan).
- ಚರ್ಚೆಯ ವಿಷಯಗಳು: ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (FTA) ಹಿನ್ನೆಲೆಯಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು.
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ