* ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್ ದೇಶದ ಅತ್ಯುನ್ನತ ಗೌರವವಾದ 'ಆರ್ಡರ್ ಆಫ್ ದಿ ನೈಲ್' (Order of the Nile) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
* ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಮೋದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ವಿವಿಧ ದೇಶಗಳಿಂದ ಸಂದ 13ನೇ ಅತ್ಯುನ್ನತ ಗೌರವ ಇದಾಗಿದೆ.
* ಆರ್ಡರ್ ಆಫ್ ದಿ ನೈಲ್ ಅನ್ನು 1915 ರಲ್ಲಿ ಆರಂಭಿಸಲಾಗಿದ್ದು,1953 ರಲ್ಲಿ ರಾಜಪ್ರಭುತ್ವವನ್ನು ರದ್ದುಪಡಿಸುವವರೆಗೂ ಈಜಿಪ್ಟ್‌ನ ಪ್ರಮುಖ ಆದೇಶಗಳಲ್ಲಿ ಒಂದಾಗಿತ್ತು.
* 1997ರ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಪಪುವಾ ನ್ಯೂಗಿನಿಯ, ಫಿಜಿ, ಭೂತಾನ್, ಅಮೆರಿಕ, ಬಹರೇನ್, ಮಾಲ್ಡೀವ್ಸ್, ರಷ್ಯಾ, ಯುಎಇ, ಪ್ಯಾಲೆಸ್ಟೀನ್, ಅಫ್ಗಾನಿಸ್ತಾನ, ಸೌದಿ ಅರೇಬಿಯಾ ರಾಷ್ಟ್ರಗಳಿಂದಲೂ ಅತ್ಯುನ್ನತ್ತ ಗೌರವಕ್ಕೆ ಮೋದಿ ಭಾಜನರಾಗಿದ್ದಾರೆ.
ಸೋಮವಾರ, 26 ಜೂನ್ 2023
10:50 ಪೂರ್ವಾಹ್ನ
Daily PDF
ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ಗೌರವ 'Order of the Nile' ಪ್ರದಾನ
Authored by:
Yallamma G