➤ ಭಾರತವನ್ನು ಭಯೋತ್ಪಾದನೆ ಮುಕ್ತಗೊಳಿಸುವ ಹಾಗೂ ದೇಶದ ಆಂತರಿಕ ಭದ್ರತೆಯನ್ನು ಅತ್ಯಂತ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ 'ಪ್ರಹಾರ್' (Prahaar) ಅನ್ನು ಅನಾವರಣಗೊಳಿಸಲಾಗಿದೆ.
➤ 'ಪ್ರಹಾರ್' ಎಂಬುದು ಭಾರತ ಸರ್ಕಾರದ ತಳಮಟ್ಟದಿಂದ (ಪೊಲೀಸ್ ಠಾಣೆ ಹಂತದಿಂದ) ಕೇಂದ್ರ ಮಟ್ಟದವರೆಗಿನ ಭದ್ರತಾ ವ್ಯವಸ್ಥೆಯನ್ನು ಸಂಪರ್ಕಿಸುವ ಮೊದಲ ರಾಷ್ಟ್ರೀಯ ಮಟ್ಟದ ಭಯೋತ್ಪಾದನಾ ನಿಗ್ರಹ ನೀತಿಯಾಗಿದೆ. ದೇಶದಲ್ಲ ಮುಂಬರುವ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಮತ್ತು ಸ್ವಯಂಚಾಲಿತ (Automated) ವ್ಯವಸ್ಥೆಯನ್ನು ಜಾರಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.
➤ ಪ್ರಹಾರ್‌ನ ಮುಖ್ಯ ಉದ್ದೇಶಗಳು:
- ಆರಂಭಿಕ ಹಂತದಲ್ಲೇ ಪತ್ತೆ: ಭಯೋತ್ಪಾದಕರ ಸಂಚುಗಳು ಹಾಗೂ ಜಾಲಗಳನ್ನು ಆರಂಭಿಕ ಹಂತದಲ್ಲೇ (Early Stage) ಗುರುತಿಸಿ ತಡೆಯುವುದು.
- ಕೇಂದ್ರ-ರಾಜ್ಯ ಸಮನ್ವಯ: ಕೇಂದ್ರ ತನಿಖಾ ಸಂಸ್ಥೆಗಳು (NIA, IB) ಮತ್ತು ರಾಜ್ಯ ಪೊಲೀಸ್ ಇಲಾಖೆಗಳ ನಡುವೆ ನಿರಂತರ, ಕ್ಷಿಪ್ರ ಮತ್ತು ಪರಿಣಾಮಕಾರಿ ಮಾಹಿತಿ ವಿನಿಮಯ.
- 10 ವರ್ಷಗಳ ರೋಡ್‌ಮ್ಯಾಪ್: ಮುಂದಿನ 10 ವರ್ಷಗಳಲ್ಲಿ ದೇಶದ ಭದ್ರತಾ ಮೂಲಸೌಕರ್ಯವನ್ನು (Security Infrastructure) ಆಧುನಿಕ ತಂತ್ರಜ್ಞಾನದೊಂದಿಗೆ ಬಲಪಡಿಸುವುದು.
➤ 'ಪ್ರಹಾರ್' ಕಾರ್ಯತಂತ್ರದ 7 ಪ್ರಮುಖ ಸ್ತಂಭಗಳು:
1. ತಡೆಗಟ್ಟುವಿಕೆ (Prevention): ಭಯೋತ್ಪಾದಕ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು.
2. ಪತ್ತೆ ಮತ್ತು ನಿಗ್ರಹ (Detection & Suppression): ಉಗ್ರರ ನೆಲೆಗಳು ಮತ್ತು ಹಣಕಾಸು ಜಾಲವನ್ನು ಮಟ್ಟಹಾಕುವುದು.
3. ಹಕ್ಕುಗಳ ರಕ್ಷಣೆ (Protection of Rights): ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಮಾನವ ಹಕ್ಕುಗಳನ್ನು ರಕ್ಷಿಸುವುದು.
4. ಪರಿಸರ ನಿರ್ಮೂಲನೆ (Eliminating Support Ecosystem): ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ, ಆಶ್ರಯ ನೀಡುವ ವಾತಾವರಣವನ್ನು ನಾಶಪಡಿಸುವುದು.
5. ಸಹಕಾರ (Cooperation): ಅಂತಾರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಏಜೆನ್ಸಿಗಳ ನಡುವೆ ಸಹಕಾರ.
6. ಸಾಮರ್ಥ್ಯ ಅಭಿವೃದ್ಧಿ (Capacity Building): ಭದ್ರತಾ ಪಡೆಗಳಿಗೆ ಆಧುನಿಕ ಆಯುಧ ಮತ್ತು ತಂತ್ರಜ್ಞಾನ ತರಬೇತಿ.
7. ಪುನಶ್ಚೇತನ ಮತ್ತು ಮರುಸ್ಥಾಪನೆ (Resilience & Recovery): ಸಂಕಷ್ಟದ ಸಮಯದಲ್ಲಿ ತ್ವರಿತ ಚೇತರಿಕೆ ಮತ್ತು ಸುಧಾರಣೆ.
➤ ಮುಖ್ಯ ವೈಶಿಷ್ಟ್ಯಗಳು ಮತ್ತು ನಾವೀನ್ಯತೆಗಳು:
- ತಳಮಟ್ಟದಲ್ಲಿ ತಂತ್ರಜ್ಞಾನ: ಉನ್ನತ ಭದ್ರತಾ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಅನಾಲಿಟಿಕ್ಸ್ ತಂತ್ರಜ್ಞಾನವನ್ನು ಪ್ರತಿಯೊಂದು ಸ್ಥಳೀಯ ಪೊಲೀಸ್ ಠಾಣೆ ಹಂತದವರೆಗೆ ತಲುಪಿಸುವುದು.
- 'ಪ್ರತ್ಯಾರ್ಪಣಾ ಪೋರ್ಟಲ್' (Extradition Portal) ಚಾಲನೆ: ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಭಯೋತ್ಪಾದಕರು ಮತ್ತು ಅಪರಾಧಿಗಳನ್ನು ಭಾರತಕ್ಕೆ ತಕ್ಷಣ ಪ್ರತ್ಯಾರ್ಪಣೆ (Extradite) ಮಾಡಲು ಈ ಡಿಜಿಟಲ್ ಪೋರ್ಟಲ್ ನೆರವಾಗಲಿದೆ.
- ವಿಶೇಷ ಕಾರ್ಯಪಡೆ (Special Task Teams): ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಜಂಟಿಯಾಗಿ ಕೆಲಸ ಮಾಡಲು ವಿಶೇಷ ಕಾರ್ಯಪಡೆಗಳ ರಚನೆ.
- ಸಾಮೂಹಿಕ ಸಹಭಾಗಿತ್ವ (Whole-of-Society Approach): ಇದು ಕೇವಲ ಭದ್ರತಾ ಪಡೆಗಳ ಕೆಲಸವಲ್ಲದೆ, ನಾಗರಿಕರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಸಮಾಜದ ಜಾಗೃತಿಯೊಂದಿಗೆ ಜಾರಿಗೆ ಬರುವ ಅಭಿಯಾನ.
'ಪ್ರಹಾರ್' (Prahaar) : ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ
Published by Akshata Halli
2 hours ago