➤ ಭಾರತವು ನವೀಕರಿಸಬಹುದಾದ ಇಂಧನ (Renewable Energy) ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದ್ದು, ದೇಶದ ಪ್ರಸರಣ ಜಾಲವನ್ನು (Transmission Network) ಬಲಪಡಿಸಲು ಪ್ರಮುಖ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 30, 2026ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಸಿರು ಇಂಧನ ಕಾರಿಡಾರ್ ಹಂತ-3 (GEC Phase-III) ಯೋಜನೆಗೆ ಅಧಿಕೃತ ಅನುಮೋದನೆ ದೊರೆತಿದೆ.
➤ 2012ರಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (PGCIL) ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಉತ್ತಮ ಸಾಮರ್ಥ್ಯವಿರುವ ಪ್ರದೇಶಗಳಲ್ಲಿ ಸೂಕ್ತವಾದ ವಿದ್ಯುತ್ ಪ್ರಸರಣ ವ್ಯವಸ್ಥೆ ಇರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿ, ಉತ್ಪಾದಿಸಿದ ಶುದ್ಧ ವಿದ್ಯುತ್ ಅನ್ನು ಸುಲಭವಾಗಿ ರಾಷ್ಟ್ರೀಯ ಗ್ರಿಡ್‌ಗೆ ತಲುಪಿಸಲು 2015ರಲ್ಲಿ 'ಹಸಿರು ಇಂಧನ ಕಾರಿಡಾರ್' ಯೋಜನೆಗೆ ಚಾಲನೆ ನೀಡಲಾಯಿತು.
- ಆರಂಭಿಕ ವರ್ಷ: 2015 (ಹಂತ-1 ಪ್ರಾರಂಭ)
- ಅನುಷ್ಠಾನ ಸಚಿವಾಲಯ: ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE)ಹಂತ-3 ಒಟ್ಟು ವೆಚ್ಚ: ₹1,86,405 ಕೋಟಿ
- ಕೇಂದ್ರ ಹಣಕಾಸು ನೆರವು (CFA): ₹54,082 ಕೋಟಿ
- ಪೂರ್ಣಗೊಳ್ಳುವ ಗುರಿ ವರ್ಷ: 2032-33 (FY 2032-33)
- ಮುಖ್ಯ ಗುರಿ: 135 GW ನವೀಕರಿಸಬಹುದಾದ ಇಂಧನ ಸರಬರಾಜು + 50 GWh ಬ್ಯಾಟರಿ ಶೇಖರಣೆ 
➤ ಹಂತ-3 ಯೋಜನೆಯ ಪ್ರಮುಖ ವಿಶೇಷತೆಗಳು:
- ರಾಜ್ಯದೊಳಗಿನ ಪ್ರಸರಣ ಜಾಲ (InSTS): ಯೋಜನೆಗೆ ನಿಗದಿಯಾದ ಒಟ್ಟು ₹1,86,405 ಕೋಟಿಯಲ್ಲಿ, ₹1,36,378 ಕೋಟಿ ಯನ್ನು ರಾಜ್ಯಗಳೊಳಗಿನ ಪ್ರಸರಣ ಮೂಲಸೌಕರ್ಯ (Intra-State Transmission Systems) ಅಭಿವೃದ್ಧಿಗಾಗಿ ಬಳಸಲಾಗುತ್ತದೆ.   
- ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆ (BESS): ಸೌರ ಮತ್ತು ಪವನ ಶಕ್ತಿಯು ಹವಾಮಾನಕ್ಕೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ. ಈ ಅಸ್ಥಿರತೆಯನ್ನು ಸರಿದೂಗಿಸಲು ₹50,000 ಕೋಟಿ ವೆಚ್ಚದಲ್ಲಿ 50 GWh (Gigawatt-hour) ಸಾಮರ್ಥ್ಯದ ಬ್ಯಾಟರಿ ಶೇಖರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.   
- ಗ್ರಿಡ್ ಸ್ಥಿರತೆ ಹಾಗೂ ನಿರ್ವಹಣೆ: ಬ್ಯಾಟರಿ ಶೇಖರಣಾ ವ್ಯವಸ್ಥೆಯು ವಿದ್ಯುತ್ ಬೇಡಿಕೆ ಹೆಚ್ಚಿರುವಾಗ (Peak Hours) ಮತ್ತು ರಾತ್ರಿ ವೇಳೆಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ ನೆರವಾಗುತ್ತದೆ.
- ವಿದ್ಯುತ್ ದರ ಇಳಿಕೆ: ಕೇಂದ್ರ ಸರ್ಕಾರದ ₹54,082 ಕೋಟಿ ಹಣಕಾಸು ನೆರವು (CFA) ರಾಜ್ಯಗಳ ಪ್ರಸರಣ ವೆಚ್ಚವನ್ನು ಕಡಿಮೆ ಮಾಡಲಿದ್ದು, ಅಂತಿಮವಾಗಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸಿಗಲು ನೆರವಾಗುತ್ತದೆ.