➤ ಭಾರತ - ಆಸ್ಟ್ರೇಲಿಯಾ ನಡುವಿನ 18 ಪ್ರಮುಖ ಒಪ್ಪಂದಗಳ ಪಟ್ಟಿ:
- ರಕ್ಷಣೆ ಮತ್ತು ಭದ್ರತಾ ಸಹಕಾರ ಜಂಟಿ ಪ್ರಕಟಣೆ (JDDSC): ಉಭಯ ದೇಶಗಳ ಸೇನಾ ಸಾಮರ್ಥ್ಯ ಹೆಚ್ಚಿಸಲು ರಕ್ಷಣಾ ಒಪ್ಪಂದ.
- ಕಡಲ ಭದ್ರತಾ ಸಹಕಾರ ಮಾರ್ಗಸೂಚಿ (MSCR): ಹಿಂದೂ ಮಹಾಸಾಗರ ವಲಯದಲ್ಲಿ ಸುರಕ್ಷತೆಗಾಗಿ ರೋಡ್‌ಮ್ಯಾಪ್.
- ಇಂಧನ ಭದ್ರತೆ ಜಂಟಿ ಪ್ರಕಟಣೆ: ಕ್ಲೀನ್ ಎನರ್ಜಿ (ಹಸಿರು ಇಂಧನ) ಕ್ಷೇತ್ರಕ್ಕೆ ಆದ್ಯತೆ.
- ನಾಗರಿಕ ಪರಮಾಣು ಒಪ್ಪಂದದ ಆಡಳಿತಾತ್ಮಕ ವ್ಯವಸ್ಥೆ: ನಾಗರಿಕ ಪರಮಾಣು ಇಂಧನ ಸಹಕಾರದ ಅಂತಿಮ ರೂಪರೇಷೆ.
- ಸೈಬರ್ ಮತ್ತು ನಿರ್ಣಾಯಕ ತಂತ್ರಜ್ಞಾನ ಪಾಲುದಾರಿಕೆ (PACTS): ಸೈಬರ್ ಭದ್ರತೆ ಮತ್ತು ಸಪ್ಲೈ ಚೈನ್ ಬಲವರ್ಧನೆ.
- ಭಾರತೀಯ ಕೋಸ್ಟ್ ಗಾರ್ಡ್ (ICG) ಮತ್ತು ಆಸ್ಟ್ರೇಲಿಯಾದ MBC ನಡುವೆ ಒಪ್ಪಂದ: ಕರಾವಳಿ ಭದ್ರತೆ ಹೆಚ್ಚಳ.
- ಆಸ್ಟ್ರೇಲಿಯನ್ ಡಿಫೆನ್ಸ್ ಕಾಲೇಜ್‌ನಲ್ಲಿ ಭಾರತೀಯ ಸೇನಾ ಅಧಿಕಾರಿ: 2028-29ರ ಅವಧಿಗೆ ಭಾರತೀಯ ಅಧಿಕಾರಿಗೆ ನಿಯೋಜನೆ.
- ಗಣಿಗಾರಿಕೆ ಮತ್ತು METS ಉತ್ಕೃಷ್ಟತಾ ಕೇಂದ್ರ ಸ್ಥಾಪನೆ: ಗಣಿಗಾರಿಕೆ ತಂತ್ರಜ್ಞಾನ ವಿನಿಮಯಕ್ಕಾಗಿ ಎಂಒಯು (MoU).
- ಬೆಂಗಳೂರಿನಲ್ಲಿ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಶಾಖೆ: ಆಸ್ಟ್ರೇಲಿಯಾದ ಪ್ರಸಿದ್ಧ 'Flinders University' ಕ್ಯಾಂಪಸ್ ಕರ್ನಾಟಕದ ಬೆಂಗಳೂರಿನಲ್ಲಿ ಸ್ಥಾಪನೆ (KPSC ಪರೀಕ್ಷೆಗಳಿಗೆ ಅತ್ಯಂತ ಪ್ರಮುಖ).
- NCVET ಮತ್ತು ASQA ನಡುವೆ ಒಪ್ಪಂದ: ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ಉತ್ತೇಜನಕ್ಕೆ ಸಹಿ.
- ಮೂರು ಭಾರತೀಯ ಐತಿಹಾಸಿಕ ಕಲಾಕೃತಿಗಳ ಮರುಸ್ಥಾಪನೆ: ಆಸ್ಟ್ರೇಲಿಯಾದಿಂದ ಭಾರತದ ಪ್ರಾಚೀನ ಕಲಾಕೃತಿಗಳ ವಾಪಸಾತಿ.
- ರೂಫ್‌ಟಾಪ್ ಟ್ರೈನಿಂಗ್ ಅಕಾಡೆಮಿ ಚಾಲನೆ: ಸೌರಶಕ್ತಿ ಇಂಧನ ತರಬೇತಿಗೆ ಉತ್ತೇಜನ.
- ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ಇನ್ನೋವೇಶನ್ ಪಾಲುದಾರಿಕೆ (ACITI).
- ಜಿಯೋಸೈನ್ಸ್ ಆಸ್ಟ್ರೇಲಿಯಾ ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡುವೆ ಎಂಒಯು.
- ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ (TKDL) ಪ್ರವೇಶ ಒಪ್ಪಂದ.
- CSIR ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯ ನಡುವೆ ಸಹಯೋಗ: ವೈಜ್ಞಾನಿಕ ಸಂಶೋಧನೆಗಳಿಗೆ ವೇದಿಕೆ.
- SRFTI ಕೋಲ್ಕತ್ತಾ ಮತ್ತು ಗ್ರಿಫಿತ್ ಫಿಲ್ಮ್ ಸ್ಕೂಲ್ ನಡುವೆ ಒಪ್ಪಂದ: ಚಲನಚಿತ್ರ ಮತ್ತು ತಂತ್ರಜ್ಞಾನ ಕ್ಷೇತ್ರ.
- ಗುರುಗ್ರಾಮದಲ್ಲಿ ವಿಕ್ಟೋರಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್: ಹರಿಯಾಣದ ಗುರುಗ್ರಾಮದಲ್ಲಿ 'Victoria University' ಸ್ಥಾಪನೆ.