➤ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು August 29, 2026 ರಿಂದ September 1, 2026 ರವರೆಗೆ ಮಧ್ಯ ಏಷ್ಯಾದ ಪ್ರಮುಖ ದೇಶಗಳಾದ ಉಜ್ಬೇಕಿಸ್ತಾನ್ ಹಾಗೂ ಕೀರ್ಗಿಸ್ತಾನ್ ಪ್ರವಾಸ ಕೈಗೊಂಡಿದ್ದಾರೆ.
1. ಪ್ರವಾಸದ ವೇಳಾಪಟ್ಟಿ ಮತ್ತು ಪ್ರಮುಖ ಹಂತಗಳು: ಪ್ರಧಾನಿ ಮೋದಿಯವರ ಈ ಮಧ್ಯ ಏಷ್ಯಾ ಪ್ರವಾಸವು ಎರಡು ಪ್ರಮುಖ ಹಂತಗಳಲ್ಲಿ ನಡೆಯಲಿದೆ:
- ಮೊದಲ ಹಂತ (ಉಜ್ಬೇಕಿಸ್ತಾನ್ ಭೇಟಿ): ಉಜ್ಬೇಕಿಸ್ತಾನ್ ಅಧ್ಯಕ್ಷ ಶಾವ್ಕತ್ ಮಿರ್ಜಿಯೋಯೆವ್ (Shavkat Mirziyoyev) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ತಾಷ್ಕೆಂಟ್‌ಗೆ ಅಧಿಕೃತ ದ್ವಿಪಕ್ಷೀಯ ಭೇಟಿ ನೀಡಲಿದ್ದಾರೆ. ಈ ವೇಳೆ ದ್ವಿಪಕ್ಷೀಯ ವ್ಯಾಪಾರ, ರಕ್ಷಣೆ, ಇಂಧನ, ಡಿಜಿಟಲ್ ಸಂಪರ್ಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ಚರ್ಚೆ ನಡೆಯಲಿದೆ.
- ಎರಡನೇ ಹಂತ (ಕೀರ್ಗಿಸ್ತಾನ್ ಭೇಟಿ): ಉಜ್ಬೇಕಿಸ್ತಾನ್ ಭೇಟಿಯ ನಂತರ ಕೀರ್ಗಿಸ್ತಾನ್ ಅಧ್ಯಕ್ಷ ಸಾದಿರ್ ಜಾಪರೋವ್ (Sadyr Zhaparov) ಅವರ ಆಹ್ವಾನದಂತೆ ಬಿಸ್ಕೆಕ್‌ಗೆ ತೆರಳಲಿದ್ದು, ಅಲ್ಲಿ ನಡೆಯಲಿರುವ 26ನೇ ಶಾಂಫೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
2. ಮೋದಿ-ಪುಟಿನ್ ದ್ವಿಪಕ್ಷೀಯ ಮಾತುಕತೆ: ಈ ಪ್ರವಾಸದ ಪ್ರಮುಖ ವಿದೇಶಾಂಗ ರಾಜತಾಂತ್ರಿಕ ಬೆಳವಣಿಗೆಯೆಂದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ನಡೆಸಲಿರುವ ದ್ವಿಪಕ್ಷೀಯ ಮಾತುಕತೆ.
- ಬಿಸ್ಕೆಕ್‌ನಲ್ಲಿ ಎಸ್‌ಸಿಒ ಶೃಂಗಸಭೆಯ ಜೊತೆಗೆ ಉಭಯ ನಾಯಕರು ವಿಶೇಷ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ರಷ್ಯಾದ ಕ್ರೆಮ್ಲಿನ್ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿಬಿ ಜಾರ್ಜ್ ದೃಢಪಡಿಸಿದ್ದಾರೆ.
- ಈ ಭೇಟಿಯಲ್ಲಿ ಭಾರತ-ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ, ರಕ್ಷಣಾ ಕ್ಷೇತ್ರ ಹಾಗೂ ಜಾಗತಿಕ ಭದ್ರತಾ ವಿಚಾರಗಳ ಕುರಿತು ಚರ್ಚೆಯಾಗಲಿದೆ.
- ಬ್ರಿಕ್ಸ್ ಶೃಂಗಸಭೆಗೆ ಮುನ್ನುಡಿ: ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮಿಸುವ ಮುನ್ನವೇ ಈ ಮಾತುಕತೆ ನಡೆಯುತ್ತಿರುವುದು ವಿಶೇಷ ಆಸಕ್ತಿ ಮೂಡಿಸಿದೆ.
ಶನಿವಾರ, 29 ಆಗಸ್ಟ್ 2026
10:47 ಪೂರ್ವಾಹ್ನ
Daily PDF
ಪ್ರಧಾನಿ ಮೋದಿ ಮಧ್ಯ ಏಷ್ಯಾ ಪ್ರವಾಸ: ಎಸ್‌ಸಿಒ ಶೃಂಗಸಭೆಯಲ್ಲಿ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ!
Authored by:
Akshata Halli