➤ ದಮನ್ ಪ್ರವಾಸದ ಭಾಗವಾಗಿ ಪ್ರಧಾನಿಯವರು ಆರೋಗ್ಯ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದ ಒಟ್ಟು 2,970 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ್ದಾರೆ.
➤ ನಮೋ ವಿಮಾನ ನಿಲ್ದಾಣದ (NAMO Airport): ದಮನ್ ಇದುವರೆಗೆ ಪ್ರಮುಖ ನಗರಗಳಾದ ಗುಜರಾತ್ ಮತ್ತು ಮಹಾರಾಷ್ಟ್ರದೊಂದಿಗೆ ಕೇವಲ ರಸ್ತೆ ಸಂಪರ್ಕವನ್ನು ಮಾತ್ರ ಹೆಚ್ಚಾಗಿ ಅವಲಂಬಿಸಿತ್ತು. ಈ ಹೊಸ ವಿಮಾನ ನಿಲ್ದಾಣದ ಆಗಮನದಿಂದಾಗಿ ಇನ್ಮುಂದೆ ದೇಶದ ಪ್ರಮುಖ ನಗರಗಳಿಗೆ ಸುಲಭ ವಾಯು ಸಂಪರ್ಕ ಸಿಗಲಿದೆ.
- ಪ್ರಯಾಣಿಕರ ಸಾಮರ್ಥ್ಯ: ಈ ಅತ್ಯಾಧುನಿಕ ಟರ್ಮಿನಲ್ ಕಟ್ಟಡದಲ್ಲಿ ಏಕಕಾಲದಲ್ಲಿ ಸುಮಾರು 180 ಪ್ರಯಾಣಿಕರಿಗೆ ಆಸನದ ಸೌಕರ್ಯ ಕಲ್ಪಿಸಲಾಗಿದೆ.
- ಪ್ರಮುಖ ನಗರಗಳೊಂದಿಗೆ ಸಂಪರ್ಕ: ಈ ಹೊಸ ಸೌಲಭ್ಯವು ದಮನ್ ಅನ್ನು ದೇಶದ ಪ್ರಮುಖ ಆರ್ಥಿಕ ಕೇಂದ್ರಗಳಾದ ಅಹಮದಾಬಾದ್, ಮುಂಬೈ ಮತ್ತು ದೆಹಲಿ ನಗರಗಳೊಂದಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ.
- ಆರ್ಥಿಕ ಮತ್ತು ಪ್ರವಾಸೋದ್ಯಮ ವೃದ್ಧಿ: ಕರಾವಳಿ ಪ್ರದೇಶವಾದ ದಮನ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಹೂಡಿಕೆದಾರರಿಗೆ ಇದು ಸುಲಭ ಪ್ರಯಾಣದ ಸೌಕರ್ಯವನ್ನು ಒದಗಿಸಲಿದ್ದು, ಸ್ಥಳೀಯ ಆರ್ಥಿಕತೆಗೆ ಹೊಸ ವೇಗ ನೀಡಲಿದೆ.
- ➤ ಸಣ್ಣ ನಗರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆ, ರೈಲ್ವೆ, ಬಂದರು ಮತ್ತು ವಾಯುಯಾನ ಸೌಲಭ್ಯಗಳನ್ನು ಸುಧಾರಿಸುವ ಕೇಂದ್ರ ಸರ್ಕಾರದ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಈ ಟರ್ಮಿನಲ್ ಅನ್ನು ನಿರ್ಮಿಸಲಾಗಿದೆ.
ಇಂದಿನ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ