* ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ಮತ್ತು ದೇಶದಲ್ಲಿ ಇವಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಕ್ಟೋಬರ್ 01 ರಂದು (ಮಂಗಳವಾರ) "ಪಿಎಂ ಇ-ಡ್ರೈವ್ ಯೋಜನೆಗೆ" ಚಾಲನೆ ನೀಡಿದ್ದು ಅದಕ್ಕಾಗಿ 10,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದೆ.
* 2024ರ ಅಕ್ಟೋಬರ್ 1ರಿಂದ 2026ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಎಲೆಕ್ಟಿಕ್ ಮೊಬಿಲಿಟಿ ಪ್ರಮೋಷನ್ ಯೋಜನೆಯನ್ನೂ ಈ ಹೊಸ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ.
* ಪ್ರತಿ ಕಿಲೋ ವಾಟ್ ಗೆ 5000 ನಿಗದಿಪಡಿಸಿದ್ದು ಮೊದಲು ವರ್ಷದಲ್ಲಿ ಗರಿಷ್ಠ 10,000 ಸಬ್ಸಿಡಿ ದೊರೆಯಲಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವಾಟ್ ಗೆ 2500 ರೂ. ಪಾವತಿಸಲಾಗುವುದು, ಸಬ್ಸಿಡಿ ಮೊತ್ತ 5000 ರೂ. ದಾಟುವಂತಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
"ಪಿಎಂ ಇ-ಡ್ರೈವ್ ಸಬ್ಸಿಡಿ ಯೋಜನೆಗೆ" ಚಾಲನೆ
Published by Yallamma G
04 ಅಕ್ಟೋಬರ್ 2024