* ಒರೆಂಥಾಲ್ ಜೇಮ್ಸ್ ಸಿಂಪ್ಸನ್ ಅವರು ಏಪ್ರಿಲ್ 11 ರಂದು ರಾತ್ರಿ ಲಾಸ್ ವೇಗಸ್‌ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ 'ಎಕ್ಸ್' ಜಾಲತಾಣದಲ್ಲಿ ಪ್ರಕಟಿಸಿದೆ. ಅವರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.
* ಫುಟ್‌ಬಾಲ್ ಕ್ಷೇತ್ರ, ನಂತರ ನಟನೆ ಹಾಗೂ ಜಾಹೀರಾತು ರಂಗದಲ್ಲಿ ಮಿಂಚಿದ್ದ ಅವರು ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ಆದರೆ 1994ರ ಜೂನ್‌ನಲ್ಲಿ ಲಾಸ್ ಏಂಜಲಿಸ್‌ನಲ್ಲಿ ಮಾಜಿ ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ದಾರುಣವಾಗಿ ಹತ್ಯೆಗೈದ ಆರೋಪ ಅವರ ಹೆಸರಿಗೆ ಕಳಂಕ ತಂದಿತು.
* ಆಮೆರಿಕದ ಫುಟ್‌ಬಾಲ್ ನ್ಯಾಷನಲ್ ಲೀಗ್‌ನಲ್ಲಿ ಅವರು ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು. 1973ರಲ್ಲಿ ಅವರು 'ಅತಿ ಅಮೂಲ್ಯ ಆಟಗಾರ ಗೌರವವನ್ನೂಪಡೆದಿದ್ದರು.
* ಫುಟ್‌ಬಾಲ್‌ಗೆ ವಿದಾಯ ಹೇಳಿ ಚಿತ್ರರಂಗ ಮತ್ತು ಜಾಹೀರಾತುಗಳಲ್ಲಿ ನಟಿಸತೊಡಗಿದ ನಂತರ ಅವರ ಜನಪ್ರಿಯತೆ ಇನ್ನಷ್ಟು ಏರಿತ್ತು. ಸಿಂಪ್ಸನ್ ಅವರು ದೇಶದ ಅತಿ ಹೆಚ್ಚು ಜನಪ್ರಿಯ ಕಪ್ಪು ವರ್ಣೀಯ ವ್ಯಕ್ತಿಯಾಗಿ ಪ್ರಸಿದ್ಧಿ ಪಡೆದಿದ್ದರು.
ಫುಟ್ ಬಾಲ ದಿಗ್ಗಜ, ಹಾಲಿವುಡ್ ನಟ ಸಿಂಪ್ಸನ್ ನಿಧನ
Published by Yallamma G
12 ಏಪ್ರಿಲ್ 2024