* ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಫೆಡರೇಶನ್ ಕಪ್ 2024ರಲ್ಲಿ ಚಿನ್ನ ಗೆದ್ದಿದ್ದಾರೆ. ಭಾರತದ ಸ್ಟಾರ್ ಅಥ್ಲೀಟ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 82.27 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೂರನೇ ಸುತ್ತಿನವರೆಗೂ 82.06 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದ ಡಿಪಿ ಮನು ಅವರನ್ನು ಅಂತಿಮ ಸುತ್ತಿನಲ್ಲಿ ನೀರಜ್ ಹಿಂದಿಕ್ಕಿದರು. ಡಿಪಿ ಮನು ಬೆಳ್ಳಿಯ ಪದಕವನ್ನು ಪಡೆದುಕೊಂಸಿದ್ದಾರೆ. ಡಿಪಿ ಮನು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.
* ಟೋಕಿಯೊ ಒಲಿಂಪಿಕ್ಸ್‌ನಲಿ ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿರುವ ಚಿನ್ನದ ಚೋಪ್ರಾ 2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 2023ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಅವರು, ಆ ಬಳಿಕ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಮ್ಮ ಚಿನ್ನವನ್ನು ಉಳಿಸಿಕೊಂಡಿದ್ದಾರೆ.
ಗುರುವಾರ, 16 ಮೇ 2024
10:52 ಪೂರ್ವಾಹ್ನ
Daily PDF
ಫೆಡರೇಶನ್ ಕಪ್ : ನೀರಜ್ ಚೋಪ್ರಾಗೆ ಚಿನ್ನ
Authored by:
Yallamma G