* ಫೆಬ್ರವರಿ 10 ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 15ನೇ ಆವೃತ್ತಿಯ 'ಏರೋ ಇಂಡಿಯಾ-2025' ವೈಮಾನಿಕ ಪ್ರದರ್ಶನ ನಡೆಯಲಿದೆ.
* 'ಶತಕೋಟಿ ಅವಕಾಶಗಳ ಪಥ' (ದಿ ರನ್‌ವೇ ಟು ಎ ಬಿಲಿಯನ್ ಆಪ್ಪೋರ್ಚುನಿಟಿಸ್) ಎಂಬ ವಿಶಾಲ ಧೈಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
* ಮೊದಲ ಮೂರೂ ದಿನಗಳು ವ್ಯವಹಾರದ ದಿನಗಳಾಗಿರುತ್ತವೆ. ಫೆ.13 ಮತ್ತು14ರಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.
* ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ.
* ಮಿತ್ರರಾಷ್ಟ್ರಗಳೊಂದಿಗೆ ರಕ್ಷಣಾ ಸಹಭಾಗಿತ್ವದ ಮಾತುಕತೆಯನ್ನು ಸುಲಭಗೊಳಿಸಲು ರಕ್ಷಣಾ ಸಚಿವರ ಸಮಾವೇಶವೂ ನಡೆಯಲಿದೆ.
* ಮಂಥನ್ ಕಾರ್ಯಕ್ರಮ ಭಾರತೀಯ ಪ್ರಚಾರವೇ ಸ್ಟಾರ್ಟ್-ಅಪ್ ಹಮ್ಮಿಕೊಳ್ಳಲಾಗಿದೆ. ನವೋದ್ಯಮಗಳ ಏರೊ ಇಂಡಿಯಾ- 2025ರ ಮುಖ್ಯ ಉದ್ದೇಶವಾಗಿದೆ.
* ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ದೇಶೀಯ ಸಾರ್ವಜನಿಕ ವಲಯದ ಉದ್ದಿಮೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭಾರತದ ಖಾಸಗಿ ರಕ್ಷಣಾ ಮತ್ತು ವೈಮಾನಿಕ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಫೆಬ್ರುವರಿ 10 ರಿಂದ ಏಷ್ಯಾದ ಅತಿದೊಡ್ಡ ಏರ್ ಶೋ `ಏರೋ ಇಂಡಿಯಾ 2025′ ಪ್ರದರ್ಶನ
Published by Jyoti Angadi
07 ಜನವರಿ 2025