* ಖ್ಯಾತ ಸಾಹಿತಿ ಪದ್ಮಶ್ರೀ ಡಾ. ಉಷಾ ಕಿರಣ್ ಖಾನ್ ಅವರು ಫೆಬ್ರುವರಿ 11 ರಂದು ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
* ಡಾ ಉಷಾ ಕಿರಣ್ ಖಾನ್ ಅವರು ಹಿಂದಿ ಮತ್ತು ಮೈಥಿಲಿಯಲ್ಲಿ ಪ್ರಸಿದ್ಧ ಬರಹಗಾರರಾಗಿದ್ದರು ಅವರ ಮೈಥಿಲಿ ಕಾದಂಬರಿ' ಭಾಮತಿ: ಏಕ್ ಅವಿಸ್ಮರಣೀಯ ಪ್ರೇಮಕಥಾ' ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಪುರಸ್ಕಾರಗಳನ್ನು ಗಳಿಸಿದರು.
* ಜುಲೈ 7, 1945 ರಂದು ಜನಿಸಿದ ಉಷಾ ಕಿರಣ್ ಖಾನ್ ಅವರು ಹಿಂದಿ ಮತ್ತು ಮೈಥಿಲಿ ಭಾಷೆಗಳಿಗೆ ನೀಡಿದ ಸಾಟಿಯಿಲ್ಲದ ಕೊಡುಗೆಗಾಗಿ ಹಲವಾರು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ.
* 2011ರಲ್ಲಿ ಅವರ ಮೈಥಿಲಿ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಮುಂದಿನ ವರ್ಷ 2012 ರಲ್ಲಿ ಅವರು ತಮ್ಮ ಕಾದಂಬರಿ 'ಸಿರ್ಜನ್ದಾರ್' ಗಾಗಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಬರಲ್ ರಿಲೇಶನ್ನಿಂದ ಕುಸುಮಾಂಜಲಿ ಸಾಹಿತ್ಯ ಸಮ್ಮಾನ್ ಪಡೆದರು.
* 2015 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸೋಮವಾರ, 12 ಫೆಬ್ರುವರಿ 2024
10:52 ಪೂರ್ವಾಹ್ನ
Daily PDF
ಪದ್ಮಶ್ರೀ ಪುರಸ್ಕೃತ ಹಿಂದಿ, ಮೈಥಿಲಿ ಲೇಖಕಿ ಉಷಾ ಕಿರಣ್ ಖಾನ್ ನಿಧನ
Authored by:
Bhagya R K