* 2023-24ನೇ ಸಾಲಿನ ರಾಜ್ಯ 'ಸಂಗೀತ ವಿದ್ವಾನ್' ಪ್ರಶಸ್ತಿಗೆ ಬೆಂಗಳೂರಿನ 91 ವರ್ಷದ ಡಾ.ಪದ್ಮಮೂರ್ತಿ ಅವರು ಆಯ್ಕೆಯಾಗಿದ್ದಾರೆ.
* ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಅಕ್ಟೋಬರ್ 15ರಂದು ಮೈಸೂರು ಅರಮನೆ ಮುಖ್ಯವೇದಿಕೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
* ಈ ಪ್ರಶಸ್ತಿ 5 ಲಕ್ಷ ರೂ. ಬಹುಮಾನ ಮೊತ್ತ ಮತ್ತು ಸರಸ್ವತಿ ವಿಗ್ರಹದ ಸ್ಮರಣಿಕೆ, ಫಲತಾಂಬೂಲ, ಶಾಲು ಮತ್ತು ಹಾರವನ್ನು ಒಳಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ.
* ಸಾವಿರಾರು ಸಂಗೀತ ಕಚೇರಿ ನೀಡಿರುವ ಪದ್ಮಮೂರ್ತಿ ಅವರು 'ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ' ಎಂಬ ಎರಡು ಸಂಪುಟಗಳ ಕೃತಿ ಬರೆದಿದ್ದಾರೆ. ಅದರ ಜೊತೆಗೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿವು ಅವರಿಗೆ ದೊರೆತಿದೆ.
ಬುಧವಾರ, 11 ಅಕ್ಟೋಬರ್ 2023
11:08 ಪೂರ್ವಾಹ್ನ
Daily PDF
ಪದ್ಮಮೂರ್ತಿಗೆ 'ಸಂಗೀತ ವಿದ್ವಾನ' ಗೌರವ ಪ್ರಶಸ್ತಿ
Authored by:
Bhagya R K