* ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ (ಪಿಪಿಬಿಎಲ್) ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು Paytm ನ ಮೂಲ ಕಂಪನಿಯಾದ One 97 Communications Ltd (OCL) ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
* ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ತನ್ನ ಪ್ರಮುಖ ವ್ಯವಹಾರಗಳನ್ನು ಮಾರ್ಚ್ 15ರ ಬಳಿಕ ಸ್ಥಗಿತಗೊಳಿಸಲು ಆರ್‌ಬಿಐ ಸೂಚಿಸಿದ್ದು, ಈ ಗಡುವಿಗೆ ಮುಂಚಿತವಾಗಿಯೇ ರಾಜೀನಾಮೆ ಸಲ್ಲಿಸಿದ್ದಾರೆ.
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಸ್ವತಂತ್ರ ನಿರ್ದೇಶಕರಾಗಿ ಮಂಡಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಫೆಬ್ರುವರಿ 26 ರಂದು ಕಂಪನಿಯು ತಿಳಿಸಿದೆ.
* ಒನ್ 97 ಕಮ್ಯುನಿಕೇಷನ್ ತನ್ನ ನಾಮಿನಿಯನ್ನು ತೆಗೆದುಹಾಕುವ ಮೂಲಕ ಕೇವಲ ಸ್ವತಂತ್ರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರನ್ನು ಹೊಂದಿರುವ ಮಂಡಳಿಯನ್ನು ಆಯ್ಕೆ ಮಾಡುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ಕ್ರಮವನ್ನು ಬೆಂಬಲಿಸುವುದಾಗಿ ತಿಳಿಸಿದೆ.
* ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ವೆಬ್ ಸೈಟ್ ಪ್ರಕಾರ : ಬ್ಯಾಂಕ್ ದೇಶದಲ್ಲಿ 30 ಕೋಟಿ ವ್ಯಾಲೆಟ್ ಗಳು ಹಾಗೂ 3 ಕೋಟಿ ಗ್ರಾಹಕರನ್ನು ಹೊಂದಿದೆ.
* ಪೇಟಿಎಂ ನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ ನ ಷೇರು ಮೌಲ್ಯ ಫೆಬ್ರುವರಿ 26 ರಂದು ಶೇ 5 ರಷ್ಟು ಏರಿಕೆಯಾಗಿದೆ. ಸೆನೆಕ್ಸ್ ಮತ್ತು ನಿಫ್ಟಿಯಲ್ಲಿ ಕ್ರಮವಾಗಿ ಷೇರಿನ ಬೆಲೆ 428,10 ಮತ್ತು 427.95 ಕ್ಕೆ ತಲುಪಿದೆ.
ಮಂಗಳವಾರ, 27 ಫೆಬ್ರುವರಿ 2024
10:28 ಪೂರ್ವಾಹ್ನ
Daily PDF
Paytm ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ
Authored by:
Bhagya R K