* ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಘಜಲ್ ಗಾಯಕ 72 ವರ್ಷ ವಯಸ್ಸಿನ ಪಂಕಜ್ ಉಧಾಸ್ ಅವರು ಫೆಬ್ರುವರಿ 26, 2024 ರಂದು ಪಂಕಜ್ ಉಧಾಸ್ ಅವರು ನಿಧನರಾದರು.
* ಗಾಯಕ ಪಂಕಜ್ ಉದಾಸ್ ಅವರು ಮುಖ್ಯವಾಗಿ ಗಝಲ್ ಗಾಯಕರು ಎಂದೇ ಖ್ಯಾತರಾಗಿದ್ದರು. ಅವರು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
* ಮಹೇಶ್ ಭಟ್ ಅವರ 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್’ ಚಿತ್ರದ ‘ಚಿತ್ತಿ ಆಯಿ ಹೈ’ ಹಾಡು ಪಂಕಜ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.
* ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಹಿನ್ನೆಲೆ ಗಾಯಕರಾಗಿ ಪಂಕಜ್ ಅವರು ಹಾಡಿದ್ದಾರೆ. ಸ್ಪರ್ಶ ಚಿತ್ರದ ಬರೆಯದ ಮೌನ ಕವಿತೆ, ಚಂದಕ್ಕಿಂತ ಚಂದ ಹಾಡನ್ನು ಪಂಕಜ್ ಅವರು ಹಾಡಿದ್ದಾರೆ.
* ಫಿಲ್ಮ್‌ಫೇರ್ ಪ್ರಶಸ್ತಿ , ಗಜಲ್ ಗಾಯನಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳ ಮೂಲಕ ಉಧಾಸ್ ಅವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಲಾಗಿದೆ .
ಮಂಗಳವಾರ, 27 ಫೆಬ್ರುವರಿ 2024
10:49 ಪೂರ್ವಾಹ್ನ
Daily PDF
ಖ್ಯಾತ ಘಜಲ್ ಗಾಯಕ ಪಂಕಜ್ ಉಧಾಸ್ ನಿಧನ
Authored by:
Bhagya R K