➤ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತೀಯ ಕಿರಿಯರ (ಜೂನಿಯರ್) ಕ್ರಿಕೆಟ್ ಆಯ್ಕೆ ಸಮಿತಿಯನ್ನು ಪುನರ್ ರಚಿಸಿದ್ದು, ಮಾಜಿ ವೇಗದ ಬೌಲರ್ ಪರ್ವಿಂದರ್ ಅವಾನಾ (Parvinder Awana) ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
➤ ಪರ್ವಿಂದರ್ ಅವಾನಾ ಕ್ರಿಕೆಟ್ ವೃತ್ತಿಜೀವನದ ವಿವರಗಳು:
- ಅಂತರರಾಷ್ಟ್ರೀಯ ಪಂದ್ಯಗಳು: ಭಾರತದ ಪರ 2 ಟಿ20 (T20I) ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
- ಪ್ರಥಮ ದರ್ಜೆ ಕ್ರಿಕೆಟ್ (First-Class): 62 ಪಂದ್ಯಗಳಲ್ಲಿ 191 ವಿಕೆಟ್ಗಳನ್ನು ಪಡೆದಿದ್ದಾರೆ.
- ಪ್ರಾತಿನಿಧ್ಯ: ದೆಹಲಿ, ಭಾರತ 'ಎ' (India A), ರೆಸ್ಟ್ ಆಫ್ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ (Kings XI Punjab) ಪರ ಸಕ್ರಿಯವಾಗಿ ಆಡಿದ್ದಾರೆ.
- ತರಬೇತುದಾರನಾಗಿ ಅನುಭವ (Coaching Experience): ನಿವೃತ್ತಿಯ ನಂತರ ತರಬೇತಿ ಕ್ಷೇತ್ರಕ್ಕೆ ಕಾಲಿಟ್ಟ ಅವಾನಾ, ದೆಹಲಿಯ ವಯೋಮಿತಿ ತಂಡಗಳು (U-16, U-19, U-23), ಭಾರತ ಅಂಡರ್-19 ತಂಡ ಹಾಗೂ ಬಿಸಿಸಿಐ/ಸಿಒಇ (COE) ಉನ್ನತ ಕಾರ್ಯಕ್ಷಮತಾ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.
➤ ನೂತನ ಕಿರಿಯರ ಆಯ್ಕೆ ಸಮಿತಿಯ ಇತರ ಸದಸ್ಯರು: ಬಿಸಿಸಿಐ ಒಟ್ಟು ನಾಲ್ಕು ಸದಸ್ಯರ ಹೆಸರನ್ನು ಪ್ರಕಟಿಸಿದ್ದು, ಐದನೇ ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಿದೆ. ಸಮಿತಿಯ ಪ್ರಮುಖ ಸದಸ್ಯರು:
- ಪರ್ವಿಂದರ್ ಅವಾನಾ – ಅಧ್ಯಕ್ಷರು (Chairperson)
- ಕೃಷ್ಣ ದಾಸ್ (Krishna Das): ಅಸ್ಸಾಂ ಮತ್ತು ಗೋವಾ ಮಾಜಿ ವೇಗಿ. 49 ಪ್ರಥಮ ದರ್ಜೆ ಪಂದ್ಯಗಳಲ್ಲಿ 166 ವಿಕೆಟ್ ಪಡೆದ ಅನುಭವ ಹೊಂದಿದ್ದಾರೆ.
- ರಾಕೇಶ್ ಪಟೇಲ್ (Rakesh Patel): ಗುಜರಾತ್ ಮತ್ತು ಬರೋಡಾ ತಂಡದ ಮಾಜಿ ಬೌಲರ್ ಹಾಗೂ ತರಬೇತುದಾರ.
- ಎನ್. ಅರ್ಜುನ್ ಯಾದವ್ (N. Arjun Yadav): 2000ರ ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಹೈದರಾಬಾದ್ನ ಮಾಜಿ ಆಟಗಾರ.