➤ 2026-27ರ ಅವಧಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗಳನ್ನು (Department-Related Parliamentary Standing Committees - DRSCs) ಪುನಾರಚಿಸಲಾಗಿದೆ. ಬಹುತೇಕ ಪ್ರಮುಖ ಸಮಿತಿಗಳ ಅಧ್ಯಕ್ಷರನ್ನು ಮುಂದುವರಿಸಲಾಗಿದ್ದರೂ, ಕೆಲವು ಪ್ರಮುಖ ಇಲಾಖೆಗಳ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.
➤ ಪ್ರಮುಖ ನೇಮಕಾತಿಗಳು ಮತ್ತು ಬದಲಾವಣೆಗಳು:
- ವಿದೇಶಾಂಗ ವ್ಯವಹಾರಗಳ ಸಮಿತಿ: ಕಾಂಗ್ರೇಸ್ ಸಂಸದ ಶಶಿ ತರೂರ್ (Shashi Tharoor) ಅವರನ್ನು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮರುನೇಮಕ ಮಾಡಲಾಗಿದೆ.
- ವಾಣಿಜ್ಯ ಸಮಿತಿ (Commerce Committee): ತೃಣಮೂಲ ಕಾಂಗ್ರೆಸ್ನ ದೋಲಾ ಸೇನ್ ಅವರ ಬದಲಾಗಿ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ (Sudhanshu Trivedi) ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
- ರಕ್ಷಣೆ ಮತ್ತು ಕೈಗಾರಿಕೆ: ರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ರಾಧಾ ಮೋಹನ್ ಸಿಂಗ್ ಹಾಗೂ ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಡಿಎಂಕೆ ಸಂಸದ ತಿರುಚಿ ಸಿವಾ (Tiruchi Siva) ನೇಮಕಗೊಂಡಿದ್ದಾರೆ.
➤ 2026-27ರ ಸಂಸದೀಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸಂಪೂರ್ಣ ಪಟ್ಟಿ
1. ವಿದೇಶಾಂಗ ವ್ಯವಹಾರಗಳು (External Affairs): ಶಶಿ ತರೂರ್(ಕಾಂಗ್ರೆಸ್): ಮರುನೇಮಕ
2. ಕೃಷಿ (Agriculture): ಚರಂಜಿತ್ ಸಿಂಗ್ ಚನ್ನಿ(ಕಾಂಗ್ರೆಸ್): ಮುಂದುವರಿಕೆ
3. ಸಾರಿಗೆ (Transport): ಸಂಜಯ್ ಕುಮಾರ್ ಝಾ(ಜೆಡಿಯು (JD-U):ಮರುನೇಮಕ
4. ಕಲ್ಲಿದ್ದಲು, ಗಣಿ ಮತ್ತು ಉಕ್ಕು (Coal, Mines & Steel): ಅನುರಾಗ್ ಠಾಕೂರ್(ಬಿಜೆಪಿ): ಮುಂದುವರಿಕೆ
5. ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Health & Family Welfare): ರಾಮ್ ಗೋಪಾಲ್ ಯಾದವ್(ಸಮಾಜವಾದಿ ಪಕ್ಷ): ಮುಂದುವರಿಕೆ
6. ಕೈಗಾರಿಕೆ (Industry): ತಿರುಚಿ ಸಿವಾ(ಡಿಎಂಕೆ): ಹೊಸ ನೇಮಕ
7. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ (Law & Justice): ಸುಜೀತ್ ಕುಮಾರ್(ಬಿಜೆಪಿ): ಹೊಸ ನೇಮಕ
8. ಶಿಕ್ಷಣ, ಮಹಿಳೆ, ಮಕ್ಕಳು ಮತ್ತು ಯುವಜನ (Education & Youth): ಮುಕುಲ್ ವಾಸ್ನಿಕ್ (ಕಾಂಗ್ರೆಸ್): ಮುಂದುವರಿಕೆ
9. ವಾಣಿಜ್ಯ (Commerce): ಸುಧಾಂಶು ತ್ರಿವೇದಿ(ಬಿಜೆಪಿ): ಹೊಸ ನೇಮಕ
10.ಇಂಧನ (Energy): ಶ್ರೀರಂಗ್ ಬಾರ್ನೆ(ಶಿವಸೇನೆ): ಮರುನೇಮಕ
11. ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ (Environment & Forests): ಮೇಧಾ ವಿಶ್ರಾಮ್ ಕುಲಕರ್ಣಿ (ಬಿಜೆಪಿ): ಮುಂದುವರಿಕೆ
12. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ (IT & Comms): ನಿಶಿಕಾಂತ್ ದುಬೆ(ಬಿಜೆಪಿ): ಮರುನೇಮಕ
13. ಗೃಹ ವ್ಯವಹಾರಗಳು (Home Affairs): ರಾಧಾ ಮೋಹನ್ ದಾಸ್ ಅಗರ್ವಾಲ್ (ಬಿಜೆಪಿ): ಮರುನೇಮಕ
14. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ (Rural Dev): ಸಪ್ತಗಿರಿ ಉಲಕಾ(ಕಾಂಗ್ರೆಸ್): ಮರುನೇಮಕ
15. ರಕ್ಷಣೆ (Defence): ರಾಧಾ ಮೋಹನ್ ಸಿಂಗ್(ಬಿಜೆಪಿ): ಹೊಸ ನೇಮಕ
16. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ: ಕೆ. ಕನಿಮೋಳಿ(ಡಿಎಂಕೆ): ಮರುನೇಮಕ