* ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿರುವ ರೊಲ್ಯಾಂಡ್ ಗ್ಯಾರೊಸ್ ಅಂಗಣದಲ್ಲಿ ಆಗಸ್ಟ್ 4 ರಂದು ನಡೆದ 2024ರ ಪ್ಯಾರಿಸ್ ಒಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 37 ವರ್ಷದ ಸರ್ಬಿಯಾ ಟೆನ್ನೀಸ್ ಲೆಜೆಂಡ್ ನೊವಾಕ್ ಜೊಕೊವಿಚ್ ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
* ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಚ್ ಭಾಜನರಾಗಿದ್ದಾರೆ.
* ಸ್ಪೇನ್ ಯುವ ತಾರೆ 22 ವರ್ಷದ ಕಾರ್ಲೊಸ್ ಅಲ್ಕರಾಝ್ ಅವರನ್ನು 7-6 (7/3), 7-6 (7/2) ಅಂತರದ ನೇರ ಸೆಟ್‌ಗಳಿಂದ ಮಣಿಸಿದ 24 ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್ ತಮ್ಮ ವೃತ್ತಿಬದುಕಿನ ಚೊಚ್ಚಲ ಒಲಿಂಪಿಕ್ಸ್ ಗೋಲ್ಡ್ ಮೆಡಲ್‌ಗೆ ಕೊರಳೊಡ್ಡಿದರು.
* ಒಲಂಪಿಕ್ಸ್ ನಲ್ಲಿ ಜೊಕೊವಿಚ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 16 ವರ್ಷಗಳ ನಂತರ ಜೊಕೊವಿಚ್ ಚಿನ್ನದ ಪದಕ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ಜೊಕೊವಿಚ್ ಅವರ ರಾಫೆಲ್ ನಡಾಲ್, ಸ್ಟೆಫಿ ಗ್ರಾಫ್, ಆಂಡ್ರೆ ಅಗಾಸ್ಸಿ, ಸೆರೆನಾ ವಿಲಿಯಮ್ಸ್ ಮತ್ತು ಗೋಲ್ಡನ್ ಸ್ಲಾಮ್ ವಿಜೇತರ ಸಾಲಿಗೆ ಸೇರಿದ್ದಾರೆ.
ಸೋಮವಾರ, 05 ಆಗಸ್ಟ್ 2024
10:50 ಪೂರ್ವಾಹ್ನ
Daily PDF
Paris Olympics 2024: ಅಲ್ಕರಾಝ್ಗೆ ಸೋಲುಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನಕ್ಕೆ ಮುತ್ತಿಟ್ಟ ಜೊಕೊವಿಚ್
Authored by:
Yallamma G