* ಭಾರತದ ಪ್ರೀತಿ ಪಾಲ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ T35 ಇವೆಂಟ್‌ನಲ್ಲಿ 200 ಮೀ ಓಟದಲ್ಲಿ ಭಾರತದ ಮೊದಲ ಕಂಚು ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
* ಭಾನುವಾರ (1 /09/2024)ನಡೆದ ಸ್ಪರ್ಧೆಯಲ್ಲಿ ಪಾಲ್ ಅವರು 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಗುರಿ ತಲುಪಿದರು. ಈ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.
* 23 ವರ್ಷ ವಯಸ್ಸಿನ ಪ್ರೀತಿ ಪಾಲ್ ಅವರು ಶುಕ್ರವಾರ ಮಹಿಳೆಯರ 100 ಮೀಟರ್ಸ್ ಓಟ (ಟಿ35) ವಿಭಾಗದಲ್ಲೂ ಕಂಚಿನ ಪದಕ ಗೆದ್ದಿದ್ದರು. ಅಲ್ಲೂ ವೈಯಕ್ತಿಕ ಉತ್ತಮ ಸಮಯದೊಂದಿಗೆ (14.21 ಸೆಕೆಂಡು) ಸಾಧನೆ ಮೆರೆದಿದ್ದರು.
* ಭಾರತದ ನಿಶಾದ್ ಕುಮಾರ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಹೈ ಜಂಪ್ T47 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದಿದ್ದು, ಇದರೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 7 ಕ್ಕೆ ತಲುಪಿದೆ. ಭಾರತ ಇದುವರೆಗೆ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದೆ.
ಸೋಮವಾರ, 02 ಸೆಪ್ಟೆಂಬರ್ 2024
10:54 ಪೂರ್ವಾಹ್ನ
Daily PDF
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ 200 ಮೀಟರ್ ಪ್ರೀತಿ ಪಾಲ್ಗೆ ಮತ್ತೊಂದು ಕಂಚು
Authored by:
Yallamma G