➤ ಈ ಬಾರಿ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ 'ಪದ್ಮವಿಭೂಷಣ' ಹಾಗೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
➤ ಪ್ರಮುಖ ವಿಜೇತರ ವಿವರಗಳು :
1. ಪದ್ಮವಿಭೂಷಣ (Padma Vibhushan):
- ಶ್ರೀ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ): ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಖ್ಯಾತರಾಗಿದ್ದ ನಟ ಧರ್ಮೇಂದ್ರ ಅವರಿಗೆ ಕಲಾ ಕ್ಷೇತ್ರದಲ್ಲಿನ ಅಪ್ರತಿಮ ಕೊಡುಗೆಗಾಗಿ ಮರಣೋತ್ತರ ಪದ್ಮವಿಭೂಷಣ ನೀಡಲಾಯಿತು. ಅವರ ಪರವಾಗಿ ಪತ್ನಿ ಹೇಮಾ ಮಾಲಿನಿ ಪ್ರಶಸ್ತಿ ಸ್ವೀಕರಿಸಿದರು.
- ಎಂ.ಎಸ್. ಎನ್ ರಾಜಮ್: ಪ್ರಸಿದ್ಧ ಶಾಸ್ತ್ರೀಯ ಪಿಟೀಲು ವಾದಕಿ ಎನ್ ರಾಜಮ್ ಅವರಿಗೂ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.
- ಶತಾವಧಾನಿ ಆರ್. ಗಣೇಶ್ (ಕರ್ನಾಟಕ): ಭಾರತೀಯ ಸಾಂಪ್ರದಾಯಿಕ ಕಲೆಯಾದ 'ಅವಧಾನ' ಪ್ರಕಾರವನ್ನು ಪುನಶ್ಚೇತನಗೊಳಿಸಿದ ಕರ್ನಾಟಕದ ಹೆಮ್ಮೆಯ ಬಹುಮುಖ ಪ್ರತಿಭೆ ಶತಾವಧಾನಿ ಆರ್. ಗಣೇಶ್ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಭೂಷಣ ಸಂದಿದೆ.
- ಉದಯ್ ಕೋಟಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆ.
- ಪಿ ಯೂಷ್ ಪಾಂಡೆ (ಮರಣೋತ್ತರ): ಜಾಹೀರಾತು ಕ್ಷೇತ್ರದ ದೈತ್ಯ ಪ್ರತಿಭೆ ಪಿಯೂಷ್ ಪಾಂಡೆ ಅವರಿಗೆ ಮರಣೋತ್ತರ ಪದ್ಮಭೂಷಣ ನೀಡಲಾಗಿದೆ.
- ಭಗತ್ ಸಿಂಗ್ ಕೋಶ್ಯಾರಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಿಗೆ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗಿದೆ.
- ಹರ್ಮನ್‌ಪ್ರೀತ್ ಕೌರ್ ಭುಲ್ಲರ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಪದ್ಮಶ್ರೀ ಒಲಿದಿದೆ.
- ಕೆ. ವಿಜಯ್ ಕುಮಾರ್: ಸಿಆರ್‌ಪಿಎಫ್ (CRPF) ಮಾಜಿ ಮಹಾನಿರ್ದೇಶಕ ಕೆ. ವಿಜಯ್ ಕುಮಾರ್ ಅವರಿಗೆ ನಾಗರಿಕ ಸೇವೆಗಾಗಿ ಪದ್ಮಶ್ರೀ ನೀಡಲಾಯಿತು.
- ಪ್ರೊಸೆಂಜಿತ್ ಚಟರ್ಜಿ: ಬಂಗಾಳಿ ಚಿತ್ರರಂಗದ ಖ್ಯಾತ ನಟ ಪ್ರೊಸೆಂಜಿತ್ ಚಟರ್ಜಿ ಅವರಿಗೆ ಕಲಾ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.
- ಶತಾವಧಾನಿ ಆರ್. ಗಣೇಶ್ (ಕಲಾ ಕ್ಷೇತ್ರ) - ಪದ್ಮಭೂಷಣ
- ಅಂಕೆಗೌಡ ಎಂ. (ಸಾಮಾಜಿಕ ಕಾರ್ಯ - ಗ್ರಂಥಾಲಯ ತಪಸ್ವಿ) - ಪದ್ಮಶ್ರೀ (ಪುಸ್ತಕಗಳನ್ನು ಸಂಗ್ರಹಿಸಿ ಬೃಹತ್ ದೇಶಿ ಗ್ರಂಥಾಲಯ ನಿರ್ಮಿಸಿದ ಸಾಧಕ)
- ಡಾ. ಪ್ರಭಾಕರ್ ಬಸವಪ್ರಭು ಕೋರೆ (ಸಾಹಿತ್ಯ ಮತ್ತು ಶಿಕ್ಷಣ) - ಪದ್ಮಶ್ರೀ (ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ಶಿಕ್ಷಣ ತಜ್ಞರು)
- ಎಂ. ಎಸ್. ಜಿ. ಸುಶೀಲಮ್ಮ (ಸಾಮಾಜಿಕ ಕಾರ್ಯ) - ಪದ್ಮಶ್ರೀ (ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ಸಂಸ್ಥಾಪಕರು)