➤ PM-AJAY ಪೋರ್ಟಲ್‌ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಉದ್ದೇಶಗಳು:
- ನೈಜ-ಸಮಯದ ಮೇಲ್ವಿಚಾರಣೆ: ಈ ಪೋರ್ಟಲ್ ಮೂಲಕ ಯೋಜನೆಗಳ ಪ್ರಗತಿ, ಹಣಕಾಸು ಹಂಚಿಕೆ ಮತ್ತು ಫಲಾನುಭವಿಗಳಿಗೆ ತಲುಪುವ ಸೌಲಭ್ಯಗಳನ್ನು ನೇರವಾಗಿ ಟ್ರ್ಯಾಕ್ ಮಾಡಬಹುದು. ಇದು ಆಡಳಿತಾತ್ಮಕ ವಿಳಂಬವನ್ನು ತಪ್ಪಿಸುತ್ತದೆ.
- ವ್ಯಾಪ್ತಿ : ದೇಶದಾದ್ಯಂತ ಇರುವ 47,000 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ (SC) ಬಹುಸಂಖ್ಯಾತ ಗ್ರಾಮಗಳು ಮತ್ತು 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಈ ಪೋರ್ಟಲ್ ಒಳಗೊಂಡಿರುವ ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
- ಮೈಲಿಗಲ್ಲು ಆಧಾರಿತ ಧನಸಹಾಯ: ಯೋಜನೆಯ ಪ್ರಗತಿಯ ಆಧಾರದ ಮೇಲೆ ಹಣ ಬಿಡುಗಡೆಯಾಗುವ ಸ್ವಯಂಚಾಲಿತ ವ್ಯವಸ್ಥೆಯನ್ನು ಇದು ಹೊಂದಿದೆ. ಇದರಿಂದ ನಿಧಿ ದುರುಪಯೋಗಕ್ಕೆ ಬ್ರೇಕ್ ಬೀಳಲಿದೆ.
- ಆದರ್ಶ ಗ್ರಾಮ ವಿಭಾಗ: ಸಾಂಪ್ರದಾಯಿಕ ಕಾಗದದ ಯೋಜನೆಗಳ ಬದಲಿಗೆ 50 ಸಾಮಾಜಿಕ-ಆರ್ಥಿಕ ಸೂಚಕಗಳ ಆಧಾರದ ಮೇಲೆ ಡಿಜಿಟಲ್ ಗ್ರಾಮ ಅಭಿವೃದ್ಧಿ ಯೋಜನೆಗಳನ್ನು (VDPs) ಸಿದ್ಧಪಡಿಸಿ ಡ್ಯಾಶ್‌ಬೋರ್ಡ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
- ಸಹಾಯ ಅನುದಾನ: ಪರಿಶಿಷ್ಟ ಜಾತಿಯ ಜನರ ಜೀವನೋಪಾಯ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗಾಗಿ ರಾಜ್ಯಗಳಿಗೆ ನೀಡಲಾಗುವ ಆರ್ಥಿಕ ನೆರವನ್ನು ಕೇಂದ್ರೀಕೃತ ಎಂಐಎಸ್ (MIS) ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
- ವಿದ್ಯಾರ್ಥಿನಿಲಯಗಳ ನಿರ್ಮಾಣ: ಎಸ್‌ಸಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ದುರಸ್ತಿ ಪ್ರಸ್ತಾವನೆಗಳನ್ನು ಡಿಜಿಟಲ್ ಆಗಿ ಸಲ್ಲಿಸಲು ಮತ್ತು ಅವುಗಳ ಪ್ರಗತಿಯನ್ನು ಪರಿಶೀಲಿಸಲು ಈ ವೇದಿಕೆ ನೆರವಾಗುತ್ತದೆ.