* ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ಮಹತ್ವದ ಕ್ರಮದಲ್ಲಿ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತದಲ್ಲಿ ಒಂಬತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿ ಫಾರ್ಸಿ (ಪರ್ಷಿಯನ್) ಅನ್ನು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಘೋಷಿಸಿದರು.
* “ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಭಾರತದ ಒಂಬತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿ ಫಾರ್ಸಿಯನ್ನು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ” ಇದು ಇರಾನ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಭಾಷಾ ಸಂಬಂಧಗಳನ್ನು ಎತ್ತಿ ತೋರಿಸಿದರು.
* ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಜೈಶಂಕರ್ ಅವರು ತಮ್ಮ ಇರಾನ್ ಕೌಂಟರ್‌ಪರ್ಟ್ ಎಚ್ ಅಮೀರ್-ಅಬ್ದುಲ್ಲಾಹಿಯಾನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ’ಪಾರ್ಸಿ’ ಭಾಷೆಗೆ ‘ಶಾಸ್ತ್ರೀಯ ಸ್ಥಾನಮಾನ’ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
* 2004 ರಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಪಡೆದ ಭಾರತದಲ್ಲಿ ತಮಿಳು ಮೊದಲ ಭಾಷೆಯಾಗಿದೆ. ಸಂಸ್ಕೃತ, ಕನ್ನಡ, ಮಲಯಾಳಂ ಮತ್ತು ಒಡಿಯಾ ಇವು ಕೇಂದ್ರ ಸರ್ಕಾರದಿಂದ ಭಾರತದಲ್ಲಿ ಶಾಸ್ತ್ರೀಯ ಭಾಷೆಗಳನ್ನು ಘೋಷಿಸಿದ ಇತರ ಭಾಷೆಗಳಾಗಿವೆ.
’ಪಾರ್ಸಿ’ ಭಾಷೆಗೆ ‘ಶಾಸ್ತ್ರೀಯ ಸ್ಥಾನಮಾನ’ ಕೇಂದ್ರ ಸರ್ಕಾರ ಘೋಷಣೆ
Published by Yallamma G
24 ಮೇ 2024