* ಭಾರತವು ಪಾಕಿಸ್ತಾನವನ್ನು ಮತ್ತೆ ಎಫ್‌ಎಟಿಎಫ್‌ನ ಬೂದುಪಟ್ಟಿಗೆ (ಗ್ರೇಲಿಸ್ಟ್) ಸೇರಿಸುವಂತೆ ಮುಂದಿನ ಸಭೆಯಲ್ಲಿ ಪ್ರಬಲವಾಗಿ ಒತ್ತಾಯಿಸುವ ನಿರೀಕ್ಷೆ ಇದೆ.
* ಈ ಕುರಿತು ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
* ಬೂದುಪಟ್ಟಿಗೆ ಸೇರ್ಪಡೆಗೊಂಡ ದೇಶಗಳಿಗೆ ಆರ್ಥಿಕವಾಗಿ ಹಲವು ಸಮಸ್ಯೆಗಳು ಎದುರಾಗುತ್ತವೆ.
* ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇರಿಸಲಾಗುತ್ತದೆ. ಇದರಿಂದ ವಿದೇಶಿ ಹೂಡಿಕೆ ಹಾಗೂ ನೆರವಿಗೆ ಪರಿಣಾಮ ಬೀರಬಹುದು.
* ಪಾಕಿಸ್ತಾನ 2018ರಲ್ಲಿ ಬೂದುಪಟ್ಟಿಗೆ ಸೇರಿಸಲಾಗಿತ್ತು ಮತ್ತು 2022ರಲ್ಲಿ ಅಿಂದ ಹೊರ ಬಿದ್ದಿತ್ತು. ಪ್ರಸ್ತುತ 25 ದೇಶಗಳು ಬೂದುಪಟ್ಟಿಯಲ್ಲಿವೆ.
* ಮೂಲಗಳ ಪ್ರಕಾರ, ಭಾರತವು ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್ ನೀಡಬಹುದಾದ ಮುಂದಿನ ಹಣಕಾಸು ನೆರವಿಗೂ ತೀವ್ರ ವಿರೋಧ ವ್ಯಕ್ತಪಡಿಸಲಿದೆ.