* ಬೆಂಗಳೂರು ಆಧಾರಿತ ಮೈನಸ್ ಝೀರೋ ಸ್ಟಾರ್ಟ್‌ಅಪ್ ಭಾರತದಲ್ಲಿಯೇ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ಈ ಕಾರು ಭಾರತೀಯ ಸಂಚಾರ ವ್ಯವಸ್ಥೆಗೆ ತಕ್ಕಂತೆ ರೂಪುಗೊಂಡಿದೆ.
* ಟೆಸ್ಲಾ ರೀತಿಯ ಆಟೋಪೈಲಟ್ ಕಾರುಗಳನ್ನು ಈಗ ಕರ್ನಾಟಕದಲ್ಲಿಯೇ ಕಾಣಬಹುದಾಗಿದೆ.
* ಈ ಕಾರು ಈಗಾಗಲೇ ಬೆಂಗಳೂರಿನ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದೆ ಎಂದು ಕಂಪನಿ ತನ್ನ ‘ಎಕ್ಸ್’ ಖಾತೆಯಲ್ಲಿ ತಿಳಿಸಿದೆ.
* ವಾಹನಗಳು, ಪಾದಚಾರಿಗಳು, ಎದುರುಗಣನೆಯ ಸ್ಥಿತಿಗಳು ಮುಂತಾದವುಗಳನ್ನು ಈ ಕಾರು ರಿಯಲ್ ಟೈಮ್‌ನಲ್ಲಿ ಗುರುತಿಸಿ ಸೂಕ್ತ ಚಾಲನೆ ನೀಡುತ್ತದೆ.
* ಅಕ್ಕಪಕ್ಕದ ಎಲ್ಲ ಚಲನೆಯನ್ನೂ ಈ ಕಾರು ಎಐ ಮೂಲಕ ಚುರುಕಾಗಿ ನೋಟಿಸಬಹುದು.
* ಇದು ದುಬಾರಿ ಲೈಡಾರ್ ಅಥವಾ ಸೆನ್ಸಾರ್‌ಗಳನ್ನು ಬಳಸದೆ, ಸಾಂಪ್ರದಾಯಿಕ ಎಐ ಮಾದರಿಗಿಂತ ವಿಭಿನ್ನ ತಂತ್ರಜ್ಞಾನವನ್ನು ಉಪಯೋಗಿಸಿದೆ.
* ಹೈ-ಡೆಫಿನೆಷನ್ ನಕ್ಷೆಗಳ ಅವಶ್ಯಕತೆಯಿಲ್ಲದೆ ಕಾರು ನಿರ್ವಹಿಸಲು ಈ ವ್ಯವಸ್ಥೆ ತಯಾರಾಗಿದೆ.
* ಸದ್ಯ ಭಾರತದಲ್ಲಿ ಎಡಿಎಸ್ ತಂತ್ರಜ್ಞಾನ ಎಲ್1 ಹಾಗೂ ಎಲ್2 ಹಂತದಲ್ಲಿದೆ. ಮೈನಸ್ ಝೀರೋ ಎಲ್2+, ಎಲ್2++ ಮತ್ತು ಎಲ್3 ತಂತ್ರಜ್ಞಾನದತ್ತ ಸಾಗಲು ಸಿದ್ಧವಾಗಿದೆ ಎಂದು ಹೇಳಿದೆ.
* ಭಾರತದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿಂದಿರುವ ಕಾರಣಗಳಿಗೆ ಪರಿಹಾರವಾಗಿ ಈ ಆಟೋಪೈಲಟ್ ಕಾರುಗಳು ನೆರವಾಗಬಹುದೆಂಬ ನಿರೀಕ್ಷೆ ಇದೆ. ಸದ್ಯ ಕಾರು ಹೆಚ್ಚಿನ ಸುರಕ್ಷತಾ ಪರೀಕ್ಷೆಗೊಳಪಡುತ್ತಿದೆ.
ಶನಿವಾರ, 24 ಮೇ 2025
4:20 ಅಪರಾಹ್ನ
Daily PDF
ಭಾರತದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು: ಚಾಲಾಕ ರಹಿತ ಕಾರು
Authored by:
Jyoti Angadi