* ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಪ್ರಮುಖ ಕ್ರಿಕೆಟ್ ಆಟಗಾರ್ತಿ ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಏಪ್ರಿಲ್ 25 ರಂದು ನಿವೃತ್ತಿ ಘೋಷಿಸಿದ್ದಾರೆ.
* 32 ವರ್ಷದ ಬಿಸ್ಮಾ ಫಿಟ್ನೆಸ್ ಕಾರಣದಿಂದ, ನಂತರ 2021ರ ಆಗಸ್ಟ್‌ನಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ನಂತರ ಕ್ರಿಕೆಟ್‌ನಿಂದ ದೀರ್ಘಕಾಲ ದೂರವಿದ್ದರು.
* ಪಾಕಿಸ್ತಾನದ ಅನುಭವಿ ಆಟಗಾರ ಬಿಸ್ಮಾ ಮರೂಫ್ ಅವರು 17 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಸಮಯವನ್ನು ಕಳೆದಿದ್ದಾರೆ.
* ಎಡಗೈ ಬ್ಯಾಟರ್ ಮತ್ತು ಲೆಗ್ ಸ್ಪಿನ್ನರ್ ಆಗಿರುವ ಬಿಸ್ಮಾ 2006ರಲ್ಲಿ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
* ಇದುವರೆಗೆ ಬಿಸ್ಮಾ ಅವರು 276 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. 33 ಅರ್ಧಶತಕಗಳು ಸೇರಿದಂತೆ 6,262 ರನ್‌ಗಳನ್ನು ಗಳಿಸಿದ್ದಾರೆ. 80 ವಿಕೆಟ್‌ಗಳನ್ನೂ ಪಡೆದಿದ್ದಾರೆ.
* ಪಾಕ್ ಮಹಿಳಾ ಕ್ರಿಕೆಟ್‌ಗೆ ನೀಡಿರುವ " ಗಣನೀಯ ಕೊಡುಗೆಗಾಗಿ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಭಾರಿಯಾಗಿರುತ್ತದೆ ಎಂದು ಮಹಿಳಾ ಘಟಕ ಅಧ್ಯಕ್ಷೆ ತಾನಿಯಾ ಮಲಿಕ್ ಹೇಳಿದ್ದಾರೆ.
ಶನಿವಾರ, 27 ಎಪ್ರಿಲ್ 2024
10:46 ಪೂರ್ವಾಹ್ನ
Daily PDF
ಪಾಕಿಸ್ತಾನದ ಬಿಸ್ಮಾ ಮರೂಫ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ
Authored by:
Yallamma G