* ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಇದೇ ತಿಂಗಳು 15,16ಕ್ಕೆ ಶಾಂಘೈ ಸಹಕಾರ ಸಂಘಟನೆ (SCO ) ಸಮಾವೇಶದಲ್ಲಿ ಭಾಗವಹಿಸಲು ವಿದೇಶಾಂಗ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಟಿಸಿದರು.
* ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ನಡೆಯಲಿದ್ದು, 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದಾರೆ.
* ಈ ಪ್ರಮುಖ ಪ್ರಾದೇಶಿಕ ಗುಂಪಿನ ಭಾಗವಾಗಿ, ಪಾಕಿಸ್ತಾನ ಮತ್ತು ಭಾರತ ಎರಡೂ ಶೃಂಗಸಭೆ ಸಭೆಗಳನ್ನು ನಡೆಸಬಹುದು.
* ಭಾರತ ಕಳೆದ ವರ್ಷ SCO ಶೃಂಗಸಭೆಯನ್ನು ಆಯೋಜಿಸಿತ್ತು, ಈ ಶೃಂಗಸಭೆಯನ್ನು ವರ್ಚುವಲ್ ಮೋಡ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ವೀಡಿಯೊ ಲಿಂಕ್ ಮೂಲಕ ಭಾಗವಹಿಸಿದ್ದರು.
* ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು 2015ರ ಡಿಸೆಂಬರ್ ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಭೇಟಿ ನೀಡಿದ್ದರು. ಇದಾದ ನಂತರ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ.
* ವಿದೇಶಾಂಗ ಸಚಿವರು ಭಾರತದ ನಿಯೋಗದ ನೇತೃತ್ವ ವಹಿಸುವರು. SCO ಶೃಂಗಸಭೆ ಮಾತ್ರ ಈ ಭೇಟಿ ನಿಗದಿಯಾಗಿದೆ ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದರು.
* ಶಾಂಘೈ ಸಹಕಾರ ಸಂಸ್ಥೆ (SCO) ಯುರೇಷಿಯನ್ ರಾಜಕೀಯ , ಆರ್ಥಿಕ , ಅಂತರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಸಂಸ್ಥೆಯಾಗಿದ್ದು 2001 ರಲ್ಲಿ ಚೀನಾ ಮತ್ತು ರಷ್ಯಾದಿಂದ ಸ್ಥಾಪಿಸಲ್ಪಟ್ಟಿದೆ.
* ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ SCOದ ಸದಸ್ಯ ರಾಷ್ಟ್ರಗಳಾಗಿವೆ. ಪ್ರಭಾವಿ ಆರ್ಥಿಕ ಮತ್ತು ಭದ್ರತಾ ಸಂಸ್ಥೆಯಾಗಿದ್ದು, ಇದು ಅತಿದೊಡ್ಡ ಟ್ರಾನ್ಸ್-ಪ್ರಾದೇಶಿಕ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಶನಿವಾರ, 05 ಅಕ್ಟೋಬರ್ 2024
12:34 ಅಪರಾಹ್ನ
Daily PDF
ಪಾಕ್ ನಲ್ಲಿ ನಡೆಯಲಿರುವ SCO ಶೃಂಗಸಭೆಗೆ ಜೈಶಂಕರ್ ಭೇಟಿ
Authored by:
Jyoti Angadi