* ಸಮಯಪಾಲನೆಯನ್ನು ಪ್ರಮಾಣೀಕರಿಸುವ ಕ್ರಮದಲ್ಲಿ ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ; ಒಂದೇ ಸಮಯ’ ನೀತಿ ಜಾರಿಗೆ ನಿರ್ಧರಿಸಿದೆ.
* ಏಕರೂಪದ ಭಾರತೀಯ ಕಾಲಮಾನ (IST– ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಗದಿಗೆ ಸಂಬಂಧಿಸಿದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಕರಡು ಮಾರ್ಗಸೂಚಿ ಪ್ರಕಟಿಸಿದೆ. ಈ ಕುರಿತು ಫೆಬ್ರುವರಿ 14ರ ವರೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.
* ದೇಶದಲ್ಲಿ ವಿವಿಧ ಕಾಲಮಾನಗಳು ಗೊಂದಲ ಉಂಟುಮಾಡಬಹುದು. ಅದಕ್ಕಾಗಿ ಒಂದೇ ಸಮಯದ ಮಾನದಂಡವನ್ನು ಅನುಸರಿಸುವ ಕಾನೂನು ಚೌಕಟ್ಟು ರೂಪಿಸಲಾಗುತ್ತಿದೆ. ಇದರೊಂದಿಗೆ ದೇಶದ ದೂರಸಂಪರ್ಕ, ಬ್ಯಾಂಕಿಂಗ್, ರಕ್ಷಣೆ, 5ಜಿ ಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಾರ್ಯಚಟುವಟಿಕೆಗಳು ಸುಲಭವಾಗಲಿದೆ.
* ವಾಣಿಜ್ಯ, ಸಾರಿಗೆ, ಆಡಳಿತ, ಕಾನೂನು, ಹಣಕಾಸು ಹಾಗೂ ಅಧಿಕೃತ ದಾಖಲೆಗಳಲ್ಲಿ ಭಾರತೀಯ ಕಾಲಮಾನ ಪದ್ಧತಿ ಏಕರೂಪವಾಗಿ ಅನುಸರಿಸಬೇಕಾಗಿದೆ.
* ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಭಾರತೀಯ ಕಾಲಮಾನವನ್ನು ಕಡ್ಡಾಯವಾಗಿ ಬಳಸಬೇಕಾಗಿದೆ. ಇದರಿಂದ ಸೈಬರ್ ಭದ್ರತೆ ಬಲಗೊಳ್ಳಲಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಇಸ್ರೊ ಏಕರೂಪ ಸಮಯ ನಿಗದಿಯಲ್ಲಿ ಸಹಕರಿಸುತ್ತಿವೆ.
"ಒಂದು ರಾಷ್ಟ್ರ, ಒಂದೇ ಸಮಯ" ಕೇಂದ್ರ ಸರ್ಕಾರದಿಂದ ಕರಡು ಮಾರ್ಗಸೂಚಿ ಪ್ರಕಟ
Published by Jyoti Angadi
27 ಜನವರಿ 2025