* ವಂದೇ ಭಾರತ್ ರೈಲು ಜಗತ್ತಿನ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೇಲೆ ಯಶಸ್ವಿಯಾಗಿ ಪ್ರಯೋಗ ನಡೆಸಿದೆ, ಮತ್ತು ಇದರ ಮೂಲಕ ಜಮ್ಮು-ಕಾಶ್ಮೀರ ನಡುವೆ ನೇರ ರೈಲು ಸಂಪರ್ಕ ಸ್ಥಾಪಿಸಲಾಗಿದೆ.
* ಶ್ರೀಮಾತಾ ವೈಷ್ಣೋದೇವಿ ಕಾತ್ರಾ ನಿಲ್ದಾಣದಿಂದ ಹೊರಟ ವಂದೇ ಭಾರತ್ ರೈಲು, 1.35 ಕಿ.ಮೀ ಉದ್ದದ ಮತ್ತು 353 ಮೀ. ಎತ್ತರದ ಕಾಮನಬಿಲ್ಲು ಆಕಾರದ ಸೇತುವೆ ಮೂಲಕ ಶ್ರೀನಗರವನ್ನು ತಲುಪಿತು. ರೈಲು ಬುಡ್ಗಾಂಗೆ ಪ್ರಯಾಣವಿಡುವ ಮೂಲಕ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳಿಸಿತು.
* ಚಳಿಗಾಲ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲು ವಿನ್ಯಾಸಗೊಳಿಸಲಾಗಿದೆ. ರೈಲಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಹೀಟಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ, ಇದರಿಂದ ಹಿಮಪಾತದ ವೇಳೆ ಸಂಚಾರದಲ್ಲಿ ಅಡ್ಡಿಯುಂಟಾಗದಂತೆ ದಟ್ಟ ಮಂಜು ಸ್ವಯಂಚಾಲಿತವಾಗಿ ಕರಗುತ್ತದೆ.
* ಪೈಲಟ್ ಮುಂಭಾಗದ ಗಾಜಿನ ಮೇಲೆ ಬೀಳುವ ಹಿಮವನ್ನು ತೆರವುಗೊಳಿಸಲು ಸ್ವಯಂಚಾಲಿನ ವಿಂಡ್‌ಶೀಲ್ಡ್ ಅಳವಡಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ ನಂತರ ಚೆನಾಬ್ ಸೇತುವೆ ಮೇಲೆ ರೈಲ್ವೆ ಸಂಚಾರ ಆರಂಭವಾಗಲಿದೆ.
ಜಗತ್ತಿನ ಎತ್ತರದ ರೈಲ್ವೆ ಸೇತುವೆ ಮೇಲೆ ವಂದೇ ಭಾರತ್ ರೈಲು ಪ್ರಯೋಗಾರ್ಥ ಸಂಚಾರ ಯಶಸ್ವಿ
Published by Jyoti Angadi
27 ಜನವರಿ 2025