* ಪ್ರಸಕ್ತ ವರ್ಷದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ₹1 ಸಾವಿರ ಕೋಟಿ ಮೌಲ್ಯದ ಜೆನೆರಿಕ್ ಔಷಧಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಡಿಸೆಂಬರ್ 20 ರಂದು ತಿಳಿಸಿದೆ.
* ದೇಶದ 785 ಜಿಲ್ಲೆಗಳಲ್ಲಿ ಇರುವ ಜೆನೆರಿಕ್ ಕೇಂದ್ರಗಳಲ್ಲಿ ಔಷಧ ಖರೀದಿಸುವ ಮೂಲಕ ಜನರು ಈ ವರ್ಷದಲ್ಲಿ ಸುಮಾರು ₹5 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ.
* 2014ರಲ್ಲಿ ದೇಶದಲ್ಲಿ ಕೇವಲ 80 ಕೇಂದ್ರಗಳಿದ್ದವು, ಸದ್ಯ ಇವುಗಳ ಸಂಖ್ಯೆ 10 ಸಾವಿರಕ್ಕೇರಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಈ ಯೋಜನೆಯಡಿ ಔಷಧ ಖರೀದಿಸುವ ಮೂಲಕ ಜನರು ₹25 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ತಿಳಿಸಿದೆ.
* 2026ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಜೆನೆರಿಕ್ ಔಷಧ ಕೇಂದ್ರಗಳ ಸಂಖ್ಯೆಯನ್ನು 25 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಹಾಗೂ ಹೊಸ ಕೇಂದ್ರಗಳ ಸ್ಥಾಪನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗುರುವಾರ, 21 ಡಿಸೆಂಬರ್ 2023
3:20 ಅಪರಾಹ್ನ
Daily PDF
ಒಂದೇ ವರ್ಷದಲ್ಲಿ 1 ಸಾವಿರ ಕೋಟಿ ಮೌಲ್ಯದ ಜನೆರಿಕ್ ಔಷಧ ಮಾರಾಟ
Authored by:
Yallamma G