* ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ಹಾಗೂ ತೆಲಂಗಾಣ ಬಿಜೆಪಿ ನಾಯಕ ಇಂದ್ರ ಸೇನಾ ರೆಡ್ಡಿ ನಲ್ಲು ಅವರನ್ನು ತ್ರಿಪುರಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
* ಒಡಿಶಾ ಮತ್ತು ತ್ರಿಪುರಾಕ್ಕೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.
* ಜಾರ್ಖಂಡ್‍ನ ಟಾಟಾ ನಗರದಲ್ಲಿರುವ ಟಾಟಾ ಸ್ಟೀಲ್ ಕಂಪನಿಯ ಉದ್ಯೋಗಿಯಾಗಿದ್ದ ರಘುಭರ್ ದಾಸ್ ಅವರನ್ನು ಪಕ್ಷಕ್ಕೆ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಬಿಜೆಪಿಯು 2014ರಿಂದ 2019ರವರೆಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತ್ತು.
* ಇಂದ್ರ ಸೇನಾ ರೆಡ್ಡಿ ಅವರು 2003ರಿಂದ 2007ರವರೆಗೆ ಸಂಯೋಜಿತ ಆಂಧ್ರಪ್ರದೇಶದ ಬಿಜೆಪಿಯ ಅಧ್ಯಕ್ಷರಾಗಿ ಮತ್ತು 2014ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಶುಕ್ರವಾರ, 20 ಅಕ್ಟೋಬರ್ 2023
10:49 ಪೂರ್ವಾಹ್ನ
Daily PDF
ಒಡಿಶಾ, ತ್ರಿಪುರಾ ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ
Authored by:
Bhagya R K