* ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲುಗಳ ಸಂಚಾರಕ್ಕೆ ಅಕ್ಟೋಬರ್ 20 ರಂದು ಚಾಲನೆ ನೀಡಲಿದ್ದಾರೆ.
* ದೆಹಲಿ-ಗಾಜಿಯಾಬಾದ್-ಮೀರತ್ ನಡುವಿನ RRTS ಕಾರಿಡಾರ್‌ನ 17-ಕಿಮೀ ಉದ್ದದ ಮಾರ್ಗದಲ್ಲಿ ಈ ರೈಲುಗಳು ಅಕ್ಟೋಬರ್ 21 ರಂದು ಪ್ರಯಾಣಿಕರಿಗೆ ಸಂಚಾರಕ್ಕೆ ತೆರೆಯಲು ನಿರ್ಧರಿಸಲಾಗಿದೆ.
* ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS) ಆಗಿದೆ. ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ.
* ನಮೋ ಸ್ಟೇಡಿಯಂ ನಂತರ ನಮೋ ರೈಲುಗಳು ಅವರ ಸ್ವಯಂ ಗೀಳಿಗೆ ಮಿತಿ ಎಂಬುದೇ ಇಲ್ಲ' ಎಂದು ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜೈರಾಮ್ ರಮೇಶ ಅವರು 'ಎಕ್ಸ್' ನಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ, 20 ಅಕ್ಟೋಬರ್ 2023
10:41 ಪೂರ್ವಾಹ್ನ
Daily PDF
ಆರ್ ಆರ್ ಟಿಎಸ್ ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ
Authored by:
Bhagya R K