➤ ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಪ್ಟ್ (EGR) ಎಂಬುದು ಶೇರು ಮಾರುಕಟ್ಟೆಯಲ್ಲಿ ನೋಂದಾಯಿತವಾಗಿರುವ ಡಿಜಿಟಲ್ ಪ್ರತಿಪತ್ರ (Security) ಆಗಿದೆ.
- ಪ್ರತಿಯೊಂದು EGR ಸಹ SEBI ಮಾನ್ಯತೆ ಪಡೆದ ವಾಲ್ಟ್‌ಗಳಲ್ಲಿ (Vaults) ಭದ್ರವಾಗಿಟ್ಟಿರುವ ನೈಜ/ಭೌತಿಕ ಚಿನ್ನದ ಹಿನ್ನೆಲೆಯನ್ನು ಹೊಂದಿರುತ್ತದೆ.
- ಶೇರುಗಳನ್ನು (Shares) ಡಿಮ್ಯಾಟ್ (Demat) ಖಾತೆಯಲ್ಲಿ ಹೊಂದುವಂತೆಯೇ, ಹೂಡಿಕೆದಾರರು ಚಿನ್ನವನ್ನು ಕೂಡ ಡಿಜಿಟಲ್ ರೂಪದಲ್ಲಿ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಇಟ್ಟುಕೊಳ್ಳಬಹುದು ಮತ್ತು ವಹಿವಾಟು ನಡೆಸಬಹುದು.
- ಹೂಡಿಕೆದಾರರು ಬಯಸಿದಾಗ ತಮ್ಮ EGR ಅನ್ನು ಹಿಂತಿರುಗಿಸಿ ನೇರವಾಗಿ ಭೌತಿಕ ಚಿನ್ನವನ್ನು (Physical Gold) ಪಡೆಯುವ ಅವಕಾಶವೂ ಇರುತ್ತದೆ.
➤ EGR ನ ಪ್ರಮುಖ ಲಕ್ಷಣಗಳು:
- ಶುದ್ಧತೆಯ ಮಾನದಂಡ: 999 (99.9% ಶುದ್ಧತೆ) ಮತ್ತು 995 (99.5% ಶುದ್ಧತೆ) ಶ್ರೇಣಿಯ ಚಿನ್ನದಲ್ಲಿ ಲಭ್ಯ.
- ವಿವಿಧ ತೂಕದ ಲಭ್ಯತೆ (Denominations): 100 ಮಿಲಿಗ್ರಾಂ (100 mg), 1 ಗ್ರಾಂ, 10 ಗ್ರಾಂ, 100 ಗ್ರಾಂ ಮತ್ತು 1 ಕೆಜಿ ಪ್ರಮಾಣಗಳಲ್ಲಿ ಚಿನ್ನವನ್ನು ಖರೀದಿಸಬಹುದು.
- ವಹಿವಾಟು ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:00 ರಿಂದ ರಾತ್ರಿ 11:30 / 11:55 ರವರೆಗೆ ವಹಿವಾಟಿಗೆ ಅವಕಾಶ.
- ಸೆಟಲ್‌ಮೆಂಟ್ ಚಕ್ರ: T+1 ದಿನಗಳ ಸೆಟಲ್‌ಮೆಂಟ್.
- GST ನಿಯಮ: ಶೇರು ಮಾರುಕಟ್ಟೆಯಲ್ಲಿ EGR ವಹಿವಾಟು ನಡೆಸುವಾಗ ಯಾವುದೇ GST ಇರುವುದಿಲ್ಲ. ಆದರೆ EGR ಅನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಿ ಹಿಂಪಡೆಯುವಾಗ ಮಾತ್ರ 3% GST ಅನ್ವಯಿಸುತ್ತದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ