- ಜಾರಿಗೆ ಬಂದ ದಿನಾಂಕ: ಎರಡೂ ದೇಶಗಳ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ತಿದ್ದುಪಡಿ ಪ್ರೋಟೋಕಾಲ್ ಜೂನ್ 19, 2026 ರಂದು ಜಾರಿಗೆ ಬಂದಿದೆ.
- ಅನ್ವಯವಾಗುವ ವರ್ಷ: ಭಾರತದಲ್ಲಿ ಈ ಹೊಸ ನಿಯಮಗಳು ಆರ್ಥಿಕ ವರ್ಷ 2027-28 (ಏಪ್ರಿಲ್ 1, 2027) ರಿಂದ ಬರುವ ಆದಾಯಕ್ಕೆ ಅನ್ವಯವಾಗಲಿವೆ.
- ಪ್ರಮುಖ ಉದ್ದೇಶ: ತೆರಿಗೆ ವಂಚನೆ, 'ಟ್ರಿಟಿ ಶಾಪಿಂಗ್' (Treaty Shopping) ಹಾಗೂ ಕೃತಕ ಕಂಪನಿ ರಚನೆಗಳ ಮೂಲಕ ಕಾನೂನುಬಾಹಿರವಾಗಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ತಡೆ ಹಾಕುವುದು.
- ತೆರಿಗೆ ದರಗಳಲ್ಲಿ ಬದಲಾವಣೆಯಿಲ್ಲ: ಈ ತಿದ್ದುಪಡಿಯಿಂದಾಗಿ ಅಸ್ತಿತ್ವದಲ್ಲಿರುವ ತೆರಿಗೆ ದರಗಳು ಅಥವಾ ತೆರಿಗೆ ಪ್ರಮಾಣದಲ್ಲಿ ಯಾವುದೇ ಹೊಸ ಬದಲಾವಣೆಯಾಗಿಲ್ಲ.
- ಪರಿಶೀಲನಾ ಅಧಿಕಾರ: ವಿದೇಶಿ ಹೂಡಿಕೆ ಅಥವಾ ವ್ಯವಹಾರದ ಮೂಲ ಉದ್ದೇಶವೇ ತೆರಿಗೆ ಉಳಿಸುವುದಾಗಿದೆ ಎಂದು ಕಂಡುಬಂದರೆ, ತೆರಿಗೆ ಅಧಿಕಾರಿಗಳು DTAA ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ನಿರಾಕರಿಸಬಹುದು.
- ನೈಜ ವಾಣಿಜ್ಯ ಉದ್ದೇಶ (Genuine Commercial Substance): ಕೇವಲ ಕಾಗದದ ಮೇಲಷ್ಟೇ ಕಂಪನಿಗಳನ್ನು ತೆರೆದು ತೆರಿಗೆ ವಿನಾಯಿತಿ ಪಡೆಯುವ ಪ್ರಯತ್ನಗಳಿಗೆ (Treaty Shopping) ಇದು ಬ್ರೇಕ್ ಹಾಕುತ್ತದೆ. ನೈಜ ವಾಣಿಜ್ಯ ಉದ್ದೇಶ ಹೊಂದಿರುವ ಹೂಡಿಕೆಗಳಿಗೆ ಮಾತ್ರ ಒಪ್ಪಂದದ ಲಾಭ ದೊರೆಯುತ್ತದೆ.
➤ BEPS ಮತ್ತು OECD ಚೌಕಟ್ಟು:
- G20/OECD BEPS ಯೋಜನೆ: ಈ ತಿದ್ದುಪಡಿಯು OECD (Organisation for Economic Co-operation and Development) ಮತ್ತು G20 ದೇಶಗಳ ಬೇಸ್ ಎರೋಶನ್ ಅಂಡ್ ಪ್ರಾಫಿಟ್ ಶಿಫ್ಟಿಂಗ್ (BEPS) ಆಕ್ಷನ್ 6 ರ ಕನಿಷ್ಠ ಮಾನದಂಡಗಳಿಗೆ (Minimum Standards) ಅನುಗುಣವಾಗಿದೆ.
- ದ್ವಿಪಕ್ಷೀಯ ಪ್ರೋಟೋಕಾಲ್ ಏಕ ಅಗತ್ಯವಾಯಿತು?: ಭಾರತವು MLI (Multilateral Instrument) ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಶ್ರೀಲಂಕಾ ಇನ್ನೂ MLI ಗೆ ಸಹಿ ಮಾಡಿಲ್ಲ. ಆದ್ದರಿಂದ ಭಾರತ ಮತ್ತು ಶ್ರೀಲಂಕಾ ಪರಸ್ಪರ ದ್ವಿಪಕ್ಷೀಯ ಮಾತುಕತೆಯ ಮೂಲಕ ಪ್ರತ್ಯೇಕ ಪ್ರೋಟೋಕಾಲ್ ತಿದ್ದುಪಡಿ ತಂದಿವೆ.
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ