* 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಯೋಜನೆಯಡಿ ಕೂಸಿನ ಮನೆಯಲ್ಲಿ ಬಿಟ್ಟು ನರೇಗಾ ಕೆಲಸಕ್ಕೆ ಹೋಗಬಹುದು.
* ಕೂಸಿನ ಮನೆಗೆ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಪ್ರತಿ ಮಗುವಿಗೆ ಒಂದು ದಿನಕ್ಕೆ 12 ರೂ ನಿಗದಿಪಡಿಸಲಾಗಿದೆ.
* ಈ ನರೇಗಾ ದಿನವನ್ನು ಫೆಬ್ರುವರಿ 2 ರಂದು ಆಚರಿಸಲಾಗುತ್ತದೆ.
* ಮೊಟ್ಟ ಮೊದಲ ಬಾರಿಗೆ ಈ ನರೇಗಾ ಯೋಜನೆಯನ್ನು ಉತ್ತರ ಪ್ರದೇಶ ಪರಿಚಯಿಸಿತು.
* ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸಬಲಳಾಗಬೇಕಾದರೆ ದುಡಿದು ಗಳಿಸಬೇಕು. ಅದರ ತಾಯಿಯಾದ ನಂತರ ಮಗುವಿನ ಲಾಲನೆ-ಪಾಲನೆಯೊಂದಿಗೆ ಸುಮಾರು ವರ್ಷಗಳನ್ನು ಕಳೆಯಬೇಕಾದ ಅನಿವಾರ್ಯತೆ ಅವಳಿಗಿರುತ್ತದೆ. ತಾಯಿ ತನ್ನ ಮಗುವನ್ನು ಬಿಟ್ಟು ನೆಮ್ಮದಿಯಿಂದ ದುಡಿಯಲು ಸಾಧ್ಯವಿಲ್ಲವೆಂಬುದನ್ನು ಮನಗಂಡು ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಕೂಲಿ ಕಾರ್ಮಿಕ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ಶುಕ್ರವಾರ, 09 ಫೆಬ್ರುವರಿ 2024
2:01 ಅಪರಾಹ್ನ
Daily PDF
ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಯೋಜನೆ ಪ್ರಾರಂಭ
Authored by:
Yallamma G