* 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾರ್ವೆ ದೇಶವು ತನ್ನ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನು ಸಡಿಲುಗೊಳಿಸಲು ಮುಂದಾಗಿದೆ. ಗರ್ಭ ಧರಿಸಿದ 5 ತಿಂಗಳಲ್ಲೂ (18 ವಾರ) ಗರ್ಭಪಾತಕ್ಕೆ ಅವಕಾಶ ಕಲ್ಪಿಸುವುದಕ್ಕೆ ಕಾನೂನು ಮಾನ್ಯತೆ ನೀಡಲಾಗುತ್ತಿದೆ.
* ಸದ್ಯಕ್ಕೆ ನಾರ್ವೆಯಲ್ಲಿ 3 ತಿಂಗಳವರೆಗೆ ಮಾತ್ರವೇ ಗರ್ಭಪಾತಕ್ಕೆ ಅವಕಾಶವಿದೆ. ಆದರೆ ಬಹುತೇಕ ಮಹಿಳೆಯರು ಈ ಮಿತಿಯನ್ನು 12ನೇ ವಾರದ ಆಚೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದರು. ಈ ಕಾಲದ ಅಗತ್ಯಕ್ಕೆ ಅನುಗುಣವಾಗಿ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ.
* ಇತ್ತೀಚಿನ ವರ್ಷಗಳಲ್ಲಿ ಯುರೋಪ್‌ನ ಹಲವು ರಾಷ್ಟ್ರಗಳ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಡಿಲಗೊಳಿಸುತ್ತಿವೆ. ಮಹಿಳೆಯರಿಗೆ ಗರ್ಭಧಾರಣೆಯ 18 ನೇ ವಾರದವರೆಗೆ ಗರ್ಭಧಾರಣೆಯನ್ನು ಕೊನೆಗೊಳಿಸಲು ಕಾನೂನುಬದ್ಧವಾಗಿದೆ. ನಾರ್ವೆಯ ಕಾನೂನುಗಳು ಪ್ರಸ್ತುತ 12 ವಾರಗಳವರೆಗೆ ಕಾನೂನುಬದ್ಧ ಗರ್ಭಪಾತವನ್ನು ಅನುಮತಿಸುತ್ತವೆ. ಆದರೆ ಇದೀಗ 18 ವಾರ ಗರ್ಭಪಾತಕ್ಕೆ ಅವಕಾಶ ಕಲ್ಪಿಸುವುದಕ್ಕೆ ಕಾನೂನು ಮಾನ್ಯತೆ ನೀಡಲಾಗುತ್ತಿದೆ.
Norway ಕಾಯ್ದೆ ಸಡಿಲ:-18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ
Published by Yallamma G
26 ಆಗಸ್ಟ್ 2024