* ಸ್ಟಾವಂಜರ್‌ನಲ್ಲಿ ನಡೆದ ರೋಮಾಂಚಕಾರಿ ಅಂತಿಮ ಸುತ್ತಿನ ನಂತರ ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ತಮ್ಮ ಏಳನೇ ನಾರ್ವೆ ಚೆಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇರಿಗೇಶಿ ಎದುರು ಡ್ರಾ ಸಾಧಿಸಿದ ಕಾರ್ಲ್‌ಸನ್, 16 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಟೂರ್ನಿಯನ್ನು ಅಂತ್ಯಗೊಳಿಸಿದರು.
* ವಿಶ್ವ ಚಾಂಪಿಯನ್ ಡಿ. ಗುಕೇಶ್ ಅಂತಿಮ ಸುತ್ತಿನಲ್ಲಿ ಅಮೆರಿಕದ ಗ್ಯಾಂಡ್ ಫ್ಯಾಬಿಯಾನೊ ಕರುವಾನಾ ವಿರುದ್ಧ ದುಬಾರಿ ಪ್ರಮಾದ ಎಸಗಿ ಮೂರನೇ ಸ್ಥಾನ ಪಡೆದುಕೊಂಡರು.
* ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್, 9ನೇ ಸುತ್ತಿನ ಅಂತ್ಯಕ್ಕೆ 15 ಅಂಕಗಳನ್ನು ಹೊಂದಿದ್ದರು. ಆ ವೇಳೆ ಗುಕೇಶ್ ಅವರ ಬಳಿ 14.5 ಅಂಕಗಳಿದ್ದವು. ಹೀಗಾಗಿ, ಇವರಿಬ್ಬರ ನಡುವೆ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ಇತ್ತು. ಒಂದು ವೇಳೆ, ಹತ್ತನೇ ಹಾಗೂ ಅಂತಿಮ ಸುತ್ತಿನಲ್ಲಿ ಕುರುವಾನ ಎದುರು ಗೆದ್ದಿದ್ದರೆ, ನಾರ್ವೆ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಗುಕೇಶ್‌ಗೆ ಸಿಗುತ್ತಿತ್ತು.
* ಅಮೆರಿಕದ ಗ್ಯಾಂಡ್ ಫ್ಯಾಬಿಯಾನೊ ಕರುವಾನ 15.5 ಅಂಕ ಸಂಪಾದಿಸಿ ಎರಡನೇ ಸ್ಥಾನ ಪಡೆದುಕೊಂಡರು. ಇರಿಗೇಶಿ 12.5 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರು.
* ಮಹಿಳೆಯರ ವಿಭಾಗದಲ್ಲಿ, ಉಕ್ರೇನ್‌ನ ಅನ್ನಾ ಮುಝಿಚುಕ್ (16.5 ಅಂಕ) ಪ್ರಶಸ್ತಿ ಜಯಿಸಿದರು. ಚೀನಾದ ಲೀ ಟಿಂಗ್ಜಿ (16 ಅಂಕ), ಭಾರತದ ಕೋನೇರು ಹಂಪಿ (15 ಅಂಕ) ಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದರು.
* ಚೀನಾದ ಜು ವೆನ್‌ಜುನ್ (13.5 ಅಂಕ), ಭಾರತದ ಆರ್.ವೈಶಾಲಿ (11 ಅಂಕ), ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ್ ಸಾರಾ ಖಾದೆಮ್ (9 ಅಂಕ) ಕ್ರಮವಾಗಿ ನಂತರದ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.
ಶನಿವಾರ, 07 ಜೂನ್ 2025
12:25 ಅಪರಾಹ್ನ
Daily PDF
Norway Chess 2025 : 7ನೇ ಬಾರಿಗೆ ಚಾಂಪಿಯನ್ ಆದ ಕಾರ್ಲ್ಸನ್
Authored by:
Yallamma G