* ಕೇಂದ್ರ ಸರ್ಕಾರವು ಇದೇ ಮೊದಲು ನಿರುದ್ಯೋಗದ ಪ್ರಮಾಣ ಕುರಿತ ಮಾಸಿಕ ಅಂಕಿಅಂಶಗಳನ್ನು ಏಪ್ರಿಲ್‌ನಿಂದ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
* ಏಪ್ರಿಲ್ ತಿಂಗಳಲ್ಲಿ 15 ವರ್ಷ ಮತ್ತು ಹೆಚ್ಚಿನ ವಯಸ್ಸಿನವರಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 5.1ರಷ್ಟಿದೆ ಎಂಬ ಮಾಹಿತಿ ಗುರುವಾರ ಬಿಡುಗಡೆಗೊಂಡಿರುವ ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯದ ವರದಿಯಲ್ಲಿ ಸನ್ನಿವೇಶವಾಗಿದೆ.
* ಇದರಲ್ಲಿ 15ರಿಂದ 29 ವರ್ಷದೊಳಗಿನವರ ನಿರುದ್ಯೋಗ ಪ್ರಮಾಣ ಶೇಕಡಾ 13.8ರಷ್ಟಿದೆ. ನಗರ ಪ್ರದೇಶದಲ್ಲಿ ಈ ವಯೋವರ್ಗದವರ ನಿರುದ್ಯೋಗ ಶೇಕಡಾ 17.2ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 12.3ರಷ್ಟಿದೆ ಎಂದು ವರದಿ ಸ್ಪಷ್ಟಪಡಿಸಿದೆ.
* ಈ ಹಿಂದೆ ಸರ್ಕಾರವು ನಿರುದ್ಯೋಗದ ಪ್ರಮಾಣವನ್ನು ತ್ರೈಮಾಸಿಕ ಹಾಗೂ ವಾರ್ಷಿಕವಾಗಿ ಪ್ರಕಟಿಸುತ್ತಿತ್ತು. ಈ ರೀತಿಯ ಪ್ರಕಟಣೆಯಿಂದ ನಿರುದ್ಯೋಗದ ಸ್ಥಿತಿಗೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ಲಭ್ಯವಲ್ಲ ಎಂಬ ಆರೋಪಗಳು ಕೇಳಿಬಂದ ಕಾರಣದಿಂದ, ಈಗ ಮಾಸಿಕ ಆಧಾರದ ಮೇಲೆ ಅಂಕಿಅಂಶ ಬಿಡುಗಡೆಗೆ ನಿರ್ಧರಿಸಲಾಗಿದೆ.
ನಿರುದ್ಯೋಗದ ಮಾಸಿಕ ಅಂಕಿಅಂಶ ಬಿಡುಗಡೆಗೆ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ
Published by Jyoti Angadi
16 ಮೇ 2025