* ನಗದು ವಹಿವಾಟುಗಳನ್ನ ತಡೆಗಟ್ಟುವ ಪ್ರಯತ್ನದಲ್ಲಿ ನಗದು ಸಾಲಗಳಲ್ಲಿ 20,000 ರೂ. ಗಳ ಮಿತಿಯನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (NBFC) ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
* ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 269 ಎಸ್‌ಎಸ್'ನ ನಿಬಂಧನೆಗಳಲ್ಲಿ ಇದು ಯಾವುದೇ ವ್ಯಕ್ತಿಯು 20,000 ರೂ.ಗಿಂತ ಹೆಚ್ಚಿನ ಸಾಲದ ಮೊತ್ತವನ್ನ ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
* ಐಐಎಫ್ಎಲ್ ಫೈನಾನ್ಸ್ ವಿರುದ್ಧ ಕ್ರಮ ಕೈಗೊಂಡ ನಂತರ ಈ ಪತ್ರವನ್ನ ಕಳುಹಿಸಲಾಗಿದ್ದು, ಇದು ಶಾಸನಬದ್ಧ ಮಿತಿಯನ್ನ ಮೀರಿ ನಗದು ರೂಪದಲ್ಲಿ ಸಾಲ ವಿತರಣೆ ಮತ್ತು ಸಂಗ್ರಹಣೆ ಸೇರಿದಂತೆ ಹಲವಾರು ನಿಯಮಗಳನ್ನ ಉಲ್ಲಂಘಿಸಿದೆ ಎಂದು ಕಂಡುಬಂದಿದೆ ಎನ್ನಲಾಗ್ತಿದೆ.
ನಗದು ಸಾಲ ವಿತರಣಾ ಮಿತಿ 20,000 ರೂಪಾಯಿ ಮೀರದಂತೆ 'NBFC'ಗಳಿಗೆ 'RBI' ಸೂಚನೆ
Published by Bhagya R K
10 ಮೇ 2024