* ಭಾರತೀಯ ನೌಕಾಪಡೆಯು ಸಿಂಗಪುರ ನೌಕಾಪಡೆಯೊಂದಿಗೆ ವಿಶಾಖಪಟ್ಟಣದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ. ಜಂಟಿ ನೌಕಾ ಸಮರಾಭ್ಯಾಸ ನಡೆಸುವ ಮೂಲಕ ಪರಸ್ಪರ ದೇಶಗಳ ಕಾರ್ಯಾಚರಣೆಯ ತತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ.
* ಸಿಂಗಪುರ ಜೊತೆಗಿನ ಕಾರ್ಯಾಚರಣೆ ವಿಸ್ತರಿಸುವ ನಡೆಯೂ ಇದಾಗಿದೆ ಎಂದು ಪೂರ್ವ ಕಮಾಂಡಿಂಗ್‌ನ ಫ್ಲ್ಯಾಗ್ ಆಫೀಸರ್ ರಾಜೇಶ್ ಧನಖಡ್ ಅವರು ತಿಳಿಸಿದ್ದಾರೆ.
* ಸಿಂಗಪುರ ಮತ್ತು ಭಾರತ ಜಂಟಿ ನೌಕಾ ಸಮರಾಭ್ಯಾಸ ನಡೆಸಲು ಹೊರಟಿರುವುದು ಇದು 31ನೇ ಬಾರಿ. ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ವಿಶಾಖಪಟ್ಟಣದಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ತಿಳಿಸಿದರು.
ಶುಕ್ರವಾರ, 10 ಮೇ 2024
9:53 ಪೂರ್ವಾಹ್ನ
Daily PDF
ಭಾರತ- ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ
Authored by:
Bhagya R K