Job Description: ➤ ಪ್ರತಿ ವರ್ಷ ಸೆಪ್ಟೆಂಬರ್ 4 ರಂದು ಜಗತ್ತಿನಾದ್ಯಂತ 'ರಾಷ್ಟ್ರೀಯ ವನ್ಯಜೀವಿ ದಿನ' (National Wildlife Day) ವನ್ನು ಆಚರಿಸಲಾಗುತ್ತದೆ. ಹವಾಮಾನ ವೈಪರೀತ್ಯ, ಅರಣ್ಯನಾಶ ಹಾಗೂ ಮಾನವನ ಅತಿಕ್ರಮಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮೂಕ ಪ್ರಾಣಿ-ಪಕ್ಷಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಮತ್ತು ಜಾಗತಿಕ ಜೀವವೈವಿಧ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ದಿನವು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.➤ ಈ ವಿಶೇಷ ದಿನವನ್ನು 2005ರಲ್ಲಿ ಅಮೆರಿಕದ ಪ್ರಾಣಿ ಕಲ್ಯಾಣಕರ್ತೆ ಮತ್ತು ಲೇಖಕಿ ಕಾಲಿನ್ ಪೇಜ್ (Colleen Paige) ಅವರು ಪ್ರಾರಂಭಿಸಿದರು. ಆರಂಭದಲ್ಲಿ ಸೆಪ್ಟೆಂಬರ್ 4ರಂದು ಮಾತ್ರ ಆಚರಿಸಲಾಗುತ್ತಿತ್ತು. ಆದರೆ, ಪ್ರಸಿದ್ಧ ಆಸ್ಟ್ರೇಲಿಯನ್ ವನ್ಯಜೀವಿ ಸಂರಕ್ಷಕ ಸ್ಲೀವ್ ಇರ್ವಿನ್ (Steve Irwin) ಅವರ ಸ್ಮರಣಾರ್ಥ ಹಾಗೂ ಹುಟ್ಟುಹಬ್ಬದ ಸವಿನೆನಪಿಗಾಗಿ ಫೆಬ್ರವರಿ 22 ರಂದೂ ಸಹ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಇದರಿಂದಾಗಿ ವರ್ಷದಲ್ಲಿ ಎರಡು ಬಾರಿ ವನ್ಯಜೀವಿ ಸಂರಕ್ಷಣೆಯ ಜಾಗೃತಿ ಅಭಿಯಾನ ನಡೆಸಿ ಗಮನ ಸೆಳೆಯಲಾಗುತ್ತದೆ.➤ ದಿನದ ಪ್ರಮುಖ ಉದ್ದೇಶ ಮತ್ತು ಮಹತ್ವ :- ಅಳಿವಿನಂಚಿನಲ್ಲಿರುವ ತಳಿಗಳ ರಕ್ಷಣೆ: ಜಗತ್ತಿನಲ್ಲಿ ಅಪಾಯದಲ್ಲಿರುವ ವನ್ಯಜೀವಿ ತಳಿಗಳನ್ನು ವಿನಾಶದಿಂದ ತಡೆಯುವುದು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು. - ಸಾರ್ವಜನಿಕ ಜಾಗೃತಿ: ಅಕ್ರಮ ಬೇಟೆ (Poaching), ಕಾಡಿನ ಒತ್ತುವರಿ, ಮತ್ತು ಮಾಲಿನ್ಯದಿಂದ ಪ್ರಕೃತಿ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹಾಗೂ ಯುವ ಪೀಳಿಗೆಗೆ ಶಿಕ್ಷಣ ನೀಡುವುದು. - ಮೃಗಾಲಯಗಳು ಮತ್ತು ಪುನರ್ವಸತಿ ಕೇಂದ್ರಗಳ ಪಾತ್ರ: ಪ್ರಾಣಿಗಳನ್ನು ರಕ್ಷಿಸಿ, ಆರೈಕೆ ಮಾಡುವ ಮೃಗಾಲಯಗಳು, ವನ್ಯಜೀವಿ ಸಂರಕ್ಷಣಾ ಕೇಂದ್ರಗಳ ಸೇವೆಯನ್ನು ಗೌರವಿಸುವುದು. ➤ ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ: ಪ್ರಮುಖ ಕಾಯಿದೆ ಮತ್ತು ಯೋಜನೆಗಳು :ಭಾರತವು ಜಾಗತಿಕ ಜೀವವೈವಿಧ್ಯತೆಯ ಸುಮಾರು 7% ರಿಂದ 8% ರಷ್ಟು ತಳಿಗಳನ್ನು ಹೊಂದಿದ್ದು, ಪ್ರಮುಖ 'ಮೆಗಾ-ಡೈವರ್ಸ್' (Mega-diverse) ರಾಷ್ಟ್ರಗಳಲ್ಲಿ ಒಂದಾಗಿದೆ. 1. ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 (Wildlife Protection Act, 1972):2. ಪ್ರಾಜೆಕ್ಟ್ ಟೈಗರ್ - 1973 (Project Tiger):3. ಪ್ರಾಜೆಕ್ಟ್ ಎಲಿಫೆಂಟ್ - 1992 (Project Elephant):4. ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು: