➤ ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ದೇಶದ ಎಲ್ಲಾ ನೋಂದಾಯಿತ ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ (Unique Identification - UID) ನೀಡಲು ಪ್ರಸ್ತಾಪಿಸಿದೆ. NMC ಇತ್ತೀಚೆಗೆ 'ವೈದ್ಯಕೀಯ ಅಭ್ಯಾಸಕಾರರ ನೋಂದಣಿ ಮತ್ತು ವೈದ್ಯಕೀಯ ಚಿಕಿತ್ಸೆ ಅಭ್ಯಾಸ ಮಾಡಲು ಪರವಾನಗಿ ( ತಿದ್ದುಪಡಿ) ನಿಯಮಾವಳಿಗಳು, 2026' (Registration of Medical Practitioners and Licence to Practice Medicine (Amendment) Regulations, 2026) ಕರಡನ್ನು ಬಿಡುಗಡೆ ಮಾಡಿದೆ.
➤ ಒಂದು ದೇಶ, ಒಂದು ಪರವಾನಗಿ" (One Nation, One Licence):
- ಪ್ರಸ್ತಾಪಿತ ನಿಯಮದಂತೆ, ಒಮ್ಮೆ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ (State Medical Council) ನೋಂದಾಯಿಸಿಕೊಂಡು ಯುಐಡಿ (UID) ಪಡೆದ ವೈದ್ಯರು, ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತ್ಯೇಕ ನೋಂದಣಿ ಇಲ್ಲದೆ ಚಿಕಿತ್ಸೆ ನೀಡಲು ಅರ್ಹರಾಗುತ್ತಾರೆ.
- ಪ್ರಸ್ತುತ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿತ್ತು, ಹೊಸ ವ್ಯವಸ್ಥೆಯಿಂದ ಈ ಶ್ರಮ ತಪ್ಪಲಿದೆ.
➤ ಯುಐಡಿ ಸಂಖ್ಯೆ ರಚನೆ (UID Generation):
- ಈ ಯುಐಡಿ ಸಂಖ್ಯೆಯನ್ನು ಎನ್‌ಎಂಸಿಯ 'ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್' (EMRB) ಕೇಂದ್ರೀಕೃತವಾಗಿ ನೀಡುತ್ತದೆ.
- ಯುಐಡಿಯಲ್ಲಿ ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕೋಡ್ ಹಾಗೂ ರಾಜ್ಯ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆ ಒಳಗೊಂಡಿರುತ್ತದೆ.
➤ ರಾಷ್ಟ್ರೀಯ ವೈದ್ಯಕೀಯ ನೋಂದಣಿ (National Medical Register - NMR):
- ರಾಜ್ಯ ಮತ್ತು ರಾಷ್ಟ್ರೀಯ ವೈದ್ಯಕೀಯ ನೋಂದಣಿ ಪುಸ್ತಕಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಪರಸ್ಪರ ಬೆಸೆಯಲ್ಪಡುತ್ತವೆ (Automatic Electronic Synchronisation).
- ಒಂದು ಕಡೆ ಬದಲಾವಣೆಯಾದರೆ ಅದು ಸ್ವಯಂಚಾಲಿತವಾಗಿ ಮತ್ತೊಂದು ರಿಜಿಸ್ಟರ್‌ನಲ್ಲೂ ಅಪ್‌ಡೇಟ್ ಆಗುತ್ತದೆ.
- ಇದರಲ್ಲಿ ವೈದ್ಯರ ಶೈಕ್ಷಣಿಕ ಅರ್ಹತೆ, ಪರವಾನಗಿ ಸ್ಥಿತಿ, ಹಾಗೂ ಶಿಸ್ತುಕ್ರಮಗಳ (ಅಮಾನತು/ರದ್ದು) ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿರುತ್ತದೆ.
➤ ಚಾಲ್ತಿಯಲ್ಲಿರುವ ವೈದ್ಯರಿಗೆ ಉಚಿತ ಅವಕಾಶ: ಈಗಾಗಲೇ ನೋಂದಾಯಿತರಾಗಿರುವ ವೈದ್ಯರು ಯುಐಡಿ ಪಡೆಯಲು EMRB ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನವೀಕರಿಸಬೇಕು. ಈ ಒನ್‌ಟೈಮ್ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.
➤ ಲೈಸೆನ್ಸ್ ಸಿಂಧುತ್ವ (Licence Validity): ವೈದ್ಯಕೀಯ ಅಭ್ಯಾಸದ ಪರವಾನಗಿಯು 5 ವರ್ಷಗಳ ಕಾಲ ಸಿಂಧುವಾಗಿರುತ್ತದೆ. ಅವಧಿ ಮುಗಿದ 3 ತಿಂಗಳೊಳಗೆ ನವೀಕರಿಸದಿದ್ದರೆ 'ಇನ್‌ಆಕ್ಟಿವ್' (Inactive) ಎಂದು ಗುರುತಿಸಲಾಗುತ್ತದೆ.