➤ 2026 ರ ದಿನಾಚರಣೆಯ ಮುಖ್ಯ ವಸ್ತುವಿಷಯ (Theme):
- "Behind the Mask: Who Heals the Healers?"
- (ಕನ್ನಡದಲ್ಲಿ: ಮುಖವಾಡದ ಹಿಂದೆ: ಗುಣಪಡಿಸುವವರನ್ನು ಗುಣಪಡಿಸುವವರು ಯಾರು?)
➤ ಡಾ. ಬಿ. ಸಿ. ರಾಯ್ ಯಾರು?
- ಇವರು ಜುಲೈ 1, 1882 ರಂದು ಜನಿಸಿ, ಜುಲೈ 1, 1962 ರಂದು ನಿಧನರಾದರು (ಅವರ ಜನನ ಮತ್ತು ಮರಣ ಎರಡೂ ಒಂದೇ ದಿನಾಂಕದಂದಾಗಿದೆ).
- ಇವರು ಪ್ರಖ್ಯಾತ ವೈದ್ಯರು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.
- ಇವರು ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು (ಅವರನ್ನು ಆಧುನಿಕ ಪಶ್ಚಿಮ ಬಂಗಾಳದ ಶಿಲ್ಪಿ ಎನ್ನಲಾಗುತ್ತದೆ).
- ಇವರ ಮಹೋನ್ನತ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 1961 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಿ ಗೌರವಿಸಿದೆ.